ಬೆಳ್ತಂಗಡಿ, ಡಿ. 13: ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಬಹಳಷ್ಟು ಖ್ಯಾತಿ ಪಡೆದಿರುವ “ಸಾಲ್ಯಾನ್ ಎಲ್ ಇಡಿ” ಇಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿದೆ.
ಮಂಗಳೂರಿನಲ್ಲಿ ನಡೆದ ದಿ| ಕಿಶೋರ್ಕುಮಾರ್ ಹಾಡುಗಳ ಗಾಯನ ದಾಖಲೆ, 100 ಗಾಯಕರು, ನಿರಂತರ 40 ಗಂಟೆಗಳ ಕಾಲ ಕರೋಕೆ ಸ್ವರೂಪದ ಗಾಯನ ಸ್ಪರ್ಧೆಯಲ್ಲಿ ಸಾಲ್ಯಾನ್ ಎಲ್ ಇಡಿ ಮಾಲಕ ಸುದೀಪ್ ಅವರು ತಮ್ಮ ಎಲ್ ಇಡಿ ಪ್ರದರ್ಶನವನ್ನು ಮಾಡುವ ಮೂಲಕ ಈ ದಾಖಲೆಯ ಪಾಲು ಪಡೆದಿದ್ದಾರೆ. ಸುದೀಪ್ ಸಾಲ್ಯಾನ್ ರವರು ಧ್ವನಿ ನ್ಯೂಸ್ ಚಾನೆಲ್ ನ ಪ್ರಧಾನ ಸಂಪಾದಕರಾಗಿದ್ದಾರೆ.






