ಅಳದಂಗಡಿ: ಬೆಳ್ತಂಗಡಿ ತಾಲೂಕಿನ ಜಿಲ್ಲಾ ವಲಯ ಯೋಜನೆಯಡಿಯ ಜೇನುಕೃಷಿ ತರಬೇತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಕ್ರಮವು ನ. 28ರಂದು ವೇಣೂರು ಹೋಬಳಿಯ ಬಡಗಕಾರಂದೂರು ಗ್ರಾಮದ ಆಲಡ್ಕ ಶ್ಯಾಮ ಸುಂದರ ಭಟ್ ಅವರ (ಮಧುಮಕ್ಷಿಕ) ವಠಾರದಲ್ಲಿ ನಡೆಯಲಿದೆ.
ತಾಲೂಕಿನ ಜೇನುಕೃಷಿಕರು ಮತ್ತು ಆಸಕ್ತರು ಭಾಗವಹಿಸುವಂತೆ ಬೆಳ್ತಂಗಡಿ ತೋಟಗಾರಿಕಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಇಲಾಖಾ ಅಧಿಕಾರಿಗಳಾದ ಭೀಮರಾಯ್ ಸೊಡ್ಡಗಿ 9741713598, ಮಹಾವೀರ್ ಶೇಬಣ್ಣವರ್ 8123921087, ಅಥವಾ ಕೆ.ಎಸ್. ಚಂದ್ರಶೇಖರ್ 9448336863 ಅವರನ್ನು ಸಂಪರ್ಕಿಸಬಹುದಾಗಿದೆ.









