ವೇಣೂರು: ಗುಂಡೂರಿ ತುಂಬೆದಲೆಕ್ಕಿಯ ಭಜನ ಮಂಡಳಿಯ ಸ್ಥಾಪಕರು, ಅಯೋಧ್ಯೆಯಲ್ಲಿ ಕರಸೇವೆ ನೀಡಿದ್ದ ವೇಣೂರು ಗೋಳಿದಡ್ಕ ಮಂಜಪ್ಪ ದೇವಾಡಿಗ ಅವರು ಇಂದು ನಿಧನ ಹೊಂದಿದರು.
ತುಂಬೆದಲೆಕ್ಕಿ ಭಜನ ಮಂಡಳಿ ಸ್ಥಾಪನೆಗೆ ಕಾರಣೀಕರ್ತರಾಗಿದ್ದ ಇವರು ಅತ್ಯುತ್ತಮ ಭಜಕರಾಗಿ ಹಲವೆಡೆಗಳಲ್ಲಿ ಸನ್ಮಾನಗಳನ್ನು ಸ್ವೀಕರಿಸಿದ್ದರು. ಇವರ ನಿಧನಕ್ಕೆ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಪಿ. ಪಡ್ಡಾಯಿಮಜಲು ಸೇರಿದಂತೆ ಹಲವಾರು ಗಣ್ಯರು, ಮಂಡಳಿ ಸದಸ್ಯರು ಕಂಬನಿ ಮಿಡಿದಿದ್ದಾರೆ.






