ಬೆಳ್ತಂಗಡಿ: ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ ಬದಿಯ ಕುಸಿದ ಭಾಗಕ್ಕೆ ಹಾಗೂ ಸೇತುವೆಯ ನಾಲ್ಕು ಬದಿ ತಡೆಗೋಡೆ ನಿರ್ಮಾಣಕ್ಕೆ ರೂ. 1.00 ಕೋಟಿ ಅನುದಾನ ಒದಗಿಸಿದ ಶಾಸಕರಾದ ಹರೀಶ್ ಪೂಂಜರಿಗೆ ಗ್ರಾಮಸ್ಥರು ಗೌರವಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಆರಂಬೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯೆ ವಿಜಯ ರಮೇಶ್ ಆರಂಬೋಡಿ ಹಾಗೂ ಈ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.






