ಮೂಡುಬಿದಿರೆ/ವೇಣೂರು: ಆಳ್ವಾಸ್ ಸ್ವಾಯತ್ತ ಕಾಲೇಜಿನ ಎನ್ಸಿಸಿ ಆರ್ಮಿ ವಿಂಗ್ನ ಕೆಡೆಟ್ ನಿಷ್ಠಾ ಪೂಜಾರಿ ಬರುವ ನವೆಂಬರ್ ತಿಂಗಳಲ್ಲಿ ಭೂತಾನ್ ದೇಶದಲ್ಲಿ ನಡೆಯಲಿರುವ ಭಾರತ – ಭೂತಾನ್ ಯುವ ಸ್ನೇಹ ಶಿಬಿರಕ್ಕೆ (ಯುವ ವಿನಿಮಯ ಕಾರ್ಯಕ್ರಮ) ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಆಯ್ಕೆಯಾಗಿರುವ ನಾಲ್ವರು ಕೆಡೆಟ್ಗಳಲ್ಲಿ ನಿಷ್ಮಾ ಪೂಜಾರಿ ಅವರೂ ಒಬ್ಬರಾಗಿದ್ದು, ಆಳ್ವಾಸ್ ಎನ್ಸಿಸಿ ಘಟಕದ ಅಂತಾರಾಷ್ಟ್ರೀಯ ಸಾಧನೆಗಳ ಸಾಲಿಗೆ ಮತ್ತೊಂದು ಹೆಗ್ಗಳಿಕೆ ಸೇರ್ಪಡೆಯಾಗಿದೆ.
ಎನ್ಸಿಸಿ ಕೆಡೆಟ್ಗಳ ನಡುವೆ ಸ್ನೇಹ, ಸಾಂಸ್ಕೃತಿಕ ವಿನಿಮಯ, ಪರಸ್ಪರ ತಿಳುವಳಿಕೆ ಮತ್ತು ಸಹಕಾರವನ್ನು ವೃದ್ಧಿಸುವ ಉದ್ದೇಶದಿಂದ ಯುವ ಸ್ನೇಹ ಶಿಬಿರವನ್ನು ಆಯೋಜಿಸಲಾಗುತ್ತದೆ. ವಿವಿಧ ದೇಶಗಳ ಕೆಡೆಟ್ಗಳು ಹಾಗೂ ಯುವ ಪ್ರತಿನಿಧಿಗಳೊಂದಿಗೆ ಸಂವಾದ, ಸಾಂಸ್ಕೃತಿಕ ವಿನಿಮಯ ನಡೆಯುತ್ತದೆ. ಈ ಮೂಲಕ ಯುವಜನರಲ್ಲಿ ನಾಯಕತ್ವ ಗುಣ, ತಂಡಸ್ಫೂರ್ತಿ, ಸಾಂಸ್ಕೃತಿಕ ತಿಕ ಅರಿವು, ಸ್ನೇಹ ಬೆಳೆಸುವ ವೇದಿಕೆಯಾಗಿ ಶಿಬಿರ ಮಹತ ಪಡೆದಿದೆ.
ಗಣರಾಜ್ಯೋತ್ಸವ ಸಾಧನೆ :
ನಿಷ್ಠಾ ಅವರು 2026ರ ಗಣರಾಜ್ಯೋತ್ಸವ ಶಿಬಿರದಲ್ಲಿ ನವದೆಹಲಿಯಲ್ಲಿ ಗೌರವ ರಕ್ಷೆ ನೀಡುವ ಅವಕಾಶ ಪಡೆದಿದ್ದರು. ಇದರೊಂದಿಗೆ ಹಾಸನದಲ್ಲಿ ನಡೆದ ಏಕ ಭಾರತ ಶ್ರೇಷ್ಠ ಭಾರತ ಶಿಬಿರ, ಐಜಿಸಿ ಶಿಬಿರ ಹಾಗೂ ಆರ್ಡಿಸಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಎನ್ಸಿಸಿ ಶಿಬಿರಗಳಲ್ಲಿ ತೋರಿದ ಸಾಧನೆಯಿಂದ ಈ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಆಳ್ವಾಸ್ ಸ್ವಾಯತ್ತ ಕಾಲೇಜಿನ ಎನ್ಸಿಸಿ ಆರ್ಮಿ ವಿಂಗ್ 18 ಕರ್ನಾಟಕ ಬೆಟಾಲಿಯನ್ ಎನ್ಸಿಸಿ, ಮಂಗಳೂರು ವ್ಯಾಪ್ತಿಗೆ ಒಳಪಡುತ್ತದೆ.
ವೇಣೂರಿನ ನಂದಿತಾ ಹಾಗೂ ನಾರಾಯಣ ಪೂಜಾರಿ ದಂಪತಿಯ ಪುತ್ರಿಯಾಗಿರುವ ನಿಷ್ಮಾ ಪೂಜಾರಿ ಪ್ರಸ್ತುತ ಆಳ್ವಾಸ್ ಸ್ವಾಯತ್ತ ಕಾಲೇಜಿನಲ್ಲಿ ತೃತೀಯ ವರ್ಷದ ಸೈನ್ಸ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.





