*ಜೂಜಾಟ ಅಡ್ಡೆ ಮೇಲೆ ದಾಳಿ ಪಿಎಸ್ಐ ಮಹೇಶ್ ಲಕ್ಷ್ಮಣ ಹೊಸಪೇಟೆ*
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ::
ಹೋಬಳಿಯ ಎನ್ ಮಹದೇವಪುರ ಗ್ರಾಮದ ಹೊರವಲಯದಲ್ಲಿ
ಅಂದರ್ ಬಾರ್ ಜೂಜಾಟ ಆಡುತ್ತಿದ್ದ ನಾಲ್ವರನ್ನು ಬಂಧಿಸಿ ₹ ಸಾವಿರದ ಒಂಬೈನೂರ ರೂಪಾಯಿ ಹಣವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ .
ಈ ಪ್ರಕರಣವನ್ನು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ.
ಎನ್ ಮಹದೇವಪುರ ಹೊರವಲಯದ ಅಂದರ್ ಬಾರ್ ಜೂಜಾಟ ಆಡುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ನಾಯಕನಹಟ್ಟಿ ಪೊಲೀಸ್ ಠಾಣೆಯ
ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಅವರು ಜೂಜಾಟದ
ಅಡ್ಡೆ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ
ಅವರಿಂದ ಸಾವಿರದ ಒಂಬೈನೂರ ರೂಪಾಯಿ ನಗದು ವಶಪಡಿಸಿಕೊಂಡು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
+ There are no comments
Add yours