ವೇಣೂರು: ನಿಯಮದ ಪ್ರಕಾರ ರಸ್ತೆ ಬದಿಯಲ್ಲಿ ಸುರಕ್ಷಿತ ಅಂತರ ಬಿಟ್ಟು ಕಾಮಗಾರಿ ನಡೆಸಬೇಕಾದ ಸ್ಥಳದಲ್ಲಿ, ಸಾರ್ವಜನಿಕ ಚರಂಡಿಯನ್ನೇ ಮುಚ್ಚಿ ಬೇಲಿ ನಿರ್ಮಿಸಿರುವ ಘಟನೆ ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿಯಲಾಜೆಯಲ್ಲಿ ಬೆಳಕಿಗೆ ಬಂದಿದೆ! ಚರಂಡಿ ಬಂದ್ ಆಗಿರುವುದರಿಂದ ಮಳೆ ನೀರು ಹರಿದುಹೋಗಲು ಜಾಗವಿಲ್ಲದೆ ಇಡೀ ಜಿಲ್ಲಾ ಪಂಚಾಯತ್ ರಸ್ತೆಯೇ ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಹಾದಿಹೋಕರು ಪರದಾಡುವಂತಾಗಿದೆ.
ವೇಣೂರಿನ ಮಿಯಲಾಜೆಯಲ್ಲಿ ಜಾಗದ ಅತಿಕ್ರಮಣದ ಭರದಲ್ಲಿ ಸಾರ್ವಜನಿಕ ಚರಂಡಿಗೇ ಕನ್ನ ಹಾಕಲಾಗಿದೆ! ರಸ್ತೆ ಬದಿಯ ಚರಂಡಿಯನ್ನೇ ಮುಚ್ಚಿ ಬೇಲಿ ಹಾಕಿದ್ದರಿಂದ, ಮಳೆ ನೀರೆಲ್ಲವೂ ರಸ್ತೆಯಲ್ಲೇ ಹರಿದು ಜಿ.ಪಂ. ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಸ್ಥಳೀಯ ಆಡಳಿತದ ಕಣ್ಣೆದುರೇ ಈ ಅತಿಕ್ರಮಣ ನಡೆದಿದ್ದರೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.




