ವೇಣೂರು/ದಕ್ಷಿಣ ಕನ್ನಡ: ವೈದ್ಯಕೀಯ ಶಿಕ್ಷಣದಲ್ಲಿ ರಾಜ್ಯಮಟ್ಟದ ಉನ್ನತ ಸಾಧನೆಯೊಂದನ್ನು ದಾಖಲಿಸುವ ಮೂಲಕ ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನ ಪ್ರಸಿದ್ಧ ವೈದ್ಯರಾಗಿರುವ ಡಾ. ಶಾಂತಿಪ್ರಸಾದ್ ಅವರ ಪುತ್ರ ಯುವ ವೈದ್ಯ ಡಾ. ಸಿದ್ಧಾಂತ್ ಅವರು ಕೀರ್ತಿ ತಂದಿದ್ದಾರೆ.


ಇವರು ಮಾಸ್ಟರ್ ಆಫ್ ಸರ್ಜರಿ (MS – Master of Surgery) ಪರೀಕ್ಷೆಯಲ್ಲಿ ರಾಜ್ಯದಲ್ಲೇ 3ನೇ Rank ಪಡೆದು ಸಾಧನೆಗೈದಿದ್ದಾರೆ. ಡಾ. ಶಾಂತಿಪ್ರಸಾದ್ ಅವರ ಸುಪುತ್ರರಾದ ಡಾ. ಸಿದ್ಧಾಂತ್ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಈ ಅಪರೂಪದ ಯಶಸ್ಸನ್ನು ಸಾಧಿಸಿದ್ದಾರೆ. ವೈದ್ಯಕೀಯ ಸ್ನಾತಕೋತ್ತರ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನ ಗಳಿಸುವ ಮೂಲಕ ಅವರು ಯುವ ವೈದ್ಯರಿಗೆ ಮಾದರಿಯಾಗಿದ್ದಾರೆ.
ಡಾ. ಸಿದ್ಧಾಂತ್ ಅವರ ಈ ಹೆಮ್ಮೆಯ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಮಾಸ್ಟರ್ ಆಫ್ ಸರ್ಜರಿ (MS) ಎನ್ನುವುದು ವೈದ್ಯಕೀಯ ಶಿಕ್ಷಣದಲ್ಲಿ (MBBS ನಂತರದ) ಅತ್ಯಂತ ಉನ್ನತ ಹಾಗೂ ಪ್ರತಿಷ್ಠಿತ ಸ್ನಾತಕೋತ್ತರ (Postgraduate) ಸರ್ಜಿಕಲ್ ಪದವಿಯಾಗಿದೆ. ರಾಜ್ಯದ 340 ವೈದ್ಯ ಅಭ್ಯರ್ಥಿಗಳ ಪೈಕಿ ಡಾ. ಸಿದ್ದಾಂತ್ ಅವರು ೩ನೇ ರ್ಯಾಂಕ್ ಗಳಿಸಿರುವುದು ಜಿಲ್ಲೆ ಹಾಗೂ ತುಳುನಾಡಿಗೆ ಕೀರ್ತಿ ತಂದಂತಾಗಿದೆ.
