ವೇಣೂರು: ತುಳುವೆರ ಕೂಟ ಪಾಣೂರು ಆಶ್ರಯದಲ್ಲಿ ಕೆಸರ್ದ ಕಂಡೊಡು ಒಂಜಿದಿನ ಕ್ರೀಡಾಕೂಟವು ಅ. 25ರಂದು ನಿಟ್ಟಡೆ ಸನಿಹದ ಪಾಣೂರು ಗದ್ದೆಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 10-00 ಗಂಟೆಗೆ ಕುಕ್ಕೇಡಿ ಹಾಲು ಉ.ಸ. ಸಂಘದ ಅಧ್ಯಕ್ಷರಾಗಿರುವ ನಿರ್ಮಲ್ ಕುಮಾರ್ ಜೈನ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಹಲವು ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದು, ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಆಟೋಟಗಳನ್ನು ಏರ್ಪಡಿಸಲಾಗಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.



