ವೇಣೂರು: ಯುವ ಸೇವಾ ಸಂಗಮ ಸೇವಾ ಟ್ರಸ್ಟ್ (ರಿ.) ವೇಣೂರು ಸಂಸ್ಥೆಗೆ ಸಂಸದರಾದ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಹರೀಶ್ ಪೂಂಜಾ ರವರ ಶಿಫಾರಸಿನ ಮೇರೆಗೆ ಎಂ ಆರ್ ಪಿ ಎಲ್ ಮಂಗಳೂರು ನವರು ಕೊಡುಗೆಯಾಗಿ ನೀಡಿದ ಆಂಬುಲೆನ್ಸ್ ಅನ್ನು ಶಾಸಕರು ಲೋಕಾರ್ಪಣೆ ಮಾಡಿದರು.


ಈ ಕಾರ್ಯಕ್ರಮದಲ್ಲಿ ವೈದ್ಯರಾದ ಶಾಂತಿಪ್ರಸಾದ್, ಪಲ್ಗುಣಿ ಸೇವಾ ಸಂಘದ ಸ್ಥಾಪಕರಾಗಿರುವ ಜಯರಾಜ್ ವಿ.ಎಸ್ ಭಾರತೀಯ ಜನತಾ ಪಾರ್ಟಿಯ ಪ್ರಭಾರಿಗಳಾದ ಜಯಂತ್ ಕೋಟ್ಯಾನ್ , ವೇಣೂರು ಸಿಎ ಬ್ಯಾಂಕಿನ ಅಧ್ಯಕ್ಷರಾದ ಸುಂದರ ಹೆಗ್ಡೆ , ಭಾಜಪ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್., ಸೀತಾರಾಮ್, ಪುರುಷೋತ್ತಮ ರಾವ್, ಯುವ ಸೇವಾ ಸಂಗಮದ ಸೇವಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಭಂಡಾರಿ, ಮಹಿಳಾ ಸಮಿತಿಯ ಅಧ್ಯಕ್ಷರಾದ ಸಂಭಾಷಿಣಿ ಉದಯಕುಮಾರ್, ಪಂಚಾಯಿತಿನ ನೀಕಟ ಪೂರ್ವ ಅಧ್ಯಕ್ಷರಾಗಿರುವ ಮಲ್ಲಿಕಾ ಕಾಶಿನಾಥ್ , ಉಪಾಧ್ಯಕ್ಷರಾದ ಉಮೇಶ್ ನಡ್ತಿ ಕಲ್ಲು , ಕೋಶಾಧಿಕಾರಿ ಪ್ರಶಾಂತ್ ಹೆಗಡೆ, ಅರುಣ್ ಕ್ರಾಸ್ತ , ಪಂಚಾಯತ್ ಸದಸ್ಯರುಗಳು ಊರಿನ ಗಣ್ಯತಿ ಗಣ್ಯರು ಯುವ ಸೇವಾ ಸಂಗಮದ ಫೌಂಡರ್ ಟ್ರಸ್ಟಿಗಳು, ಟ್ರಸ್ಟಿಗಳು ಸದಸ್ಯರು ಹಾಗೂ ಹಿತೈಷಿಗಳು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಯುವ ಸೇವಾ ಸಂಗಮದ ಸ್ಥಾಪಕರಾಗಿರುವ ಕೆ. ವಿಜಯ ಗೌಡ ಪ್ರಾಸ್ತವಿಕದೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಯಾಗಿರುವ ಯೋಗೀಶ್ ಧನ್ಯವಾದ ನೀಡಿದರು.



