ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಶ್ರೀ ದೈವ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪೊಸರಡ್ಕ ಕ್ಷೇತ್ರಕ್ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಗುರುವಾಯನಕೆರೆ ವತಿಯಿಂದ ₹2 ಲಕ್ಷ ಧನಸಹಾಯ ನೀಡಲಾಯಿತು.


2026ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಪೊಸರಡ್ಕ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದ ಬ್ರಹ್ಮಕುಂಭಾಭಿಷೇಕದ ಹಿನ್ನೆಲೆಯಲ್ಲಿ ಈ ದೇಣಿಗೆಯನ್ನು ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಧನಸಹಾಯ ಒದಗಿಸಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಗುರುವಾಯನಕೆರೆಯ ಯೋಜನಾಧಿಕಾರಿ ಹರೀಶ್ ಆರ್.ಎಸ್. ಅವರು ₹2 ಲಕ್ಷದ ಚೆಕ್ ಅನ್ನು ಪೊಸರಡ್ಕ ಆಡಳಿತ ಸಮಿತಿಯವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೊಸರಡ್ಕ ಬ್ರಹ್ಮಕುಂಭಾಭಿಷೇಕ ಸಮಿತಿಯ ಗೌರವಾಧ್ಯಕ್ಷ ಕೆ. ಹೇಮರಾಜ್ ಬೆಳ್ಳಿಬೀಡು, ಸುರೇಂದ್ರ ಬಳ್ಳಾಲ್ ಮಲಾರಬೀಡು, ಪೊಸರಡ್ಕ ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು ಕುಕ್ಕೇರಬೆಟ್ಟು ಗುತ್ತು, ಕಾರ್ಯಾಧ್ಯಕ್ಷರಾದ ಎಂ.ಎಸ್. ಪೂಜಾರಿ ಉಚ್ಚೂರು ಹಾಗು ನಾರಾಯಣ ಪೂಜಾರಿ ಉಚ್ಚೂರು, ಕಾರ್ಯದರ್ಶಿ ಆದಿತ್ಯ ಪಿ.ಕೆ. ಮತ್ತೊಟ್ಟು, ಜೊತೆ ಕಾರ್ಯದರ್ಶಿಗಳಾದ ವಿಶು ಕುಮಾರ್ ಜೈನ್ ಪಾರೊಟ್ಟು ಹಾಗೂ ಯೋಗೇಂದ್ರ ಆಚಾರ್ಯ ಸೌಪರ್ಣಿಕ, ಉಪಾಧ್ಯಕ್ಷರಾದ ಆನಂದ ಶೆಟ್ಟಿ ಬೆರ್ಕೆ, ಸುಂದರ ಕುರುಡಾಯಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರೋಡಿ ಎ ಒಕ್ಕೂಟದ ಅಧ್ಯಕ್ಷ ರಾಜು ಪೂಜಾರಿ, ಬಿ ಒಕ್ಕೂಟದ ಅಧ್ಯಕ್ಷ ರಾಜು ಪೂಜಾರಿ,
ಮೇಲ್ವಿಚಾರಕರು ದಿವ್ಯ ಕೆ ಎಸ್, ಸೇವಾ ಪ್ರತಿನಿಧಿ ಶಶಿಕಲಾ ತುಂಬೆ ಮರೋಡಿ ಕಾರ್ಯಕ್ಷೇತ್ರ, ವಿ.ಎಲ್.ಇ . ಸೌಮ್ಯ ಮರೋಡಿ ಕಾರ್ಯಕ್ಷೇತ್ರ, ಕಾರ್ಯದರ್ಶಿ ರಂಜಿತ್,
ಜೊತೆ ಕಾರ್ಯದರ್ಶಿ ರಾಜಶ್ರೀ ಹಾಗೂ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.



