ಮೂಡುಬಿದಿರೆ: ಶಿಕಾರಿಪುರ ನಿವಾಸಿ ಸಬೀರಾ ಬಾನು (20) ತವರು ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾದ ಪ್ರಕರಣ ದಾಖಲಾಗಿದೆ.


ಎರಡು ವರ್ಷಗಳ ಹಿಂದೆ ಶಿವಮೊಗ್ಗದ ಶಿಕಾರಿಪುರದ ಅಶ್ವಾಕ್ ಅಹಮ್ಮದ್ ಅವರನ್ನು ವಿವಾಹವಾಗಿದ್ದ ಸಬೀರಾ ಬಾನು ಜುಲೈ 10ರಂದು ತವರು ಮನೆಗೆ ಬಂದಿದ್ದರು. ಜುಲೈ 27ರಂದು ಫಿರ್ಯಾದುದಾರರ ದೊಡ್ಡಮ್ಮ ಸಬೀನಾ ಬಾನು ಅವರ ಮನೆಗೆ ತೆರಳಿದ್ದ ವೇಳೆ ಸಬೀರಾ ಬಾನು ಮನೆಯಿಂದ ನಾಪತ್ತೆಯಾಗಿದ್ದಾರೆ.
ಬಳಿಕ ಮೊಬೈಲ್ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದ್ದು, ಅಕ್ಷಾಕ್ ಅಹಮ್ಮದ್ ಅವರ ಮನೆ, ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ನೆರೆಮನೆಯ ಯುವಕನೊಂದಿಗೆ ತೆರಳಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸಬೀರಾ ಬಾನು ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಆಯುಕ್ತರು ಅಥವಾ ಠಾಣಾಧಿಕಾರಿ, ಮಡುಬಿದಿರೆ ಪೊಲೀಸ್ ಠಾಣೆ ಅವರಿಗೆ ಮಾಹಿತಿ ನೀಡುವಂತೆ
ಕೋರಲಾಗಿದೆ.



