ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ವಾರ್ಷಿಕ ರಜಾ ಕ್ಯಾಲೆಂಡರ್ ಪ್ರಕಾರ, ಆಗಸ್ಟ್ 2026ರಲ್ಲಿ ಎಚ್ಡಿಎಫ್, ಎಸ್ಬಿಐ, ಪಿಎಂಬಿ ಸೇರಿದಂತೆ ಇನ್ನಿತರ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳು 14 ದಿನಗಳ ಬಂದ್ ಆಗಲಿವೆ. ನಿತ್ಯ ಹಣಕಾಸು ಸಂಬಂಧಿ ವ್ಯವಹಾರಗಳಿಗೆ ಹಾಗೂ ಇತರ ಕೆಲಸಗಳಿಗೆ ಬ್ಯಾಂಕ್ಗಳಿಗೆ ತೆರಳು ಗ್ರಾಹಕರು ಆಗಸ್ಟ್ ಹಾಲಿಡೇ ಪಟ್ಟಿಯನ್ನು ಗಮನಿಸಬೇಕು.

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲಿವೆ. ಇದರಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರದಂತ ರಜಾ ದಿನಗಳಿವೆ, ಸ್ವಾತಂತ್ರ್ಯ ದಿನಾಚರಣೆ, ಮಿಲಾದ್-ಉನ್-ನಬಿ, ರಕ್ಷಾ ಬಂಧನ ಹೀಗೆ ಅನೇಕ ಪ್ರಾದೇಶಿಕ ಹಬ್ಬಗಳು ಒಳಗೊಂಡಿವೆ.
ಬ್ಯಾಂಕ್ ಕಾರ್ಯ ನಿರ್ವಹಿಸದ (ಬಂದ್ ಇರುವ) ದಿನ ನಗದು ರೂಪದ ಹಣಕಾಸು ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ. ಬ್ಯಾಂಕ್ ನಿಂದ ನಗದು ಹಣ ಪಡೆಯುವುದು, ಚೆಕ್ ಕ್ಲಿಯರೆನ್ಸ್ ಹಾಗೂ ಖುದ್ದು ಶಾಖೆಗಳಿಗೆ ಭೇಟಿ ನೀಡುವ ಕೆಲಸಗಳನ್ನು ಮುಂದೂಡಬೇಕಾಗುತ್ತದೆ. ಈ ರಜೆಗಳಿಗೆ ತಕ್ಕಂತೆ ನಿಮ್ಮ ಹಣಕಾಸು ವ್ಯವಹಾರ ಪ್ಲ್ಯಾನ್ ಮಾಡಿಕೊಳ್ಳಬಹುದಾಗಿದೆ.
ದೇಶದ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ಆಯಾ ವರ್ಷದ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಆರ್ಬಿಐ ತಯಾರಿಸುತ್ತದೆ. ದೇಶದಲ್ಲಿ ಕೆಲವು ಸಾರ್ವತ್ರಿಕ ರಜಾನದಿಗಳಿದ್ದು, ಇನ್ನು ಕೆಲವು ಆಯಾ ರಾಜ್ಯಗಳ ಆಚರಣೆಗೆ ಅನುಗುಣವಾಗಿ ಬ್ಯಾಂಕ್ಗಳಿಗೆ ರಜೆ ಘೋಷಿಸಲಾಗಿರುತ್ತದೆ. ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಡುವ ಮೊದಲು ಆಗಸ್ಟ್ ತಿಂಗಳ ಬ್ಯಾಂಕ್ ರಜಾ ವೇಳಾಪಟ್ಟಿ ಗಮನಿಸಬೇಕಿದೆ.
ಬ್ಯಾಂಕ್ ರಜಾ ಪಟ್ಟಿ – ಆಗಸ್ಟ್ 2026
* ಆಗಸ್ಟ್ 2: ಭಾನುವಾರ *
ಆಗಸ್ಟ್ 4: ಕೆರ್ ಪೂಜಾ (ಅಗರ್ತಲಾ) *
ಆಗಸ್ಟ್ 8 : ಎರಡನೇ ಶನಿವಾರ *
ಆಗಸ್ಟ್ 9: ಭಾನುವಾರ *
ಆಗಸ್ಟ್ 13 : ದೇಶಪ್ರೇಮಿಗಳ ದಿನ (ಇಂಫಾಲ್) *
ಆಗಸ್ಟ್ 15: ಸ್ವಾತಂತ್ರ್ಯ ದಿನ (ರಾಷ್ಟ್ರವ್ಯಾಪಿ) *
ಆಗಸ್ಟ್ 16: ಭಾನುವಾರ *
ಆಗಸ್ಟ್ 19: ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಜಯಂತಿ (ಅಗರ್ತಲಾ) *
ಆಗಸ್ಟ್ 22: ನಾಲ್ಕನೇ ಶನಿವಾರ *
ಆಗಸ್ಟ್ 23: ಭಾನುವಾರ *
ಆಗಸ್ಟ್ 25: ಮಿಲಾದ್-ಉನ್-ನಬಿ, ಮೊದಲ ಓಣಂ, ಮಿಲಾದ್-ಎ-ಷರೀಫ್ (ಕೇರಳ ಮತ್ತು ವಿಜಯವಾಡ) *
ಆಗಸ್ಟ್ 26: ರಕ್ಷಾ ಬಂಧನ, ಶ್ರೀ ನಾರಾಯಣಗುರು ಜಯಂತಿ *
ಆಗಸ್ಟ್ 28: ಅಹಮದಾಬಾದ್, ಭೋಪಾಲ್, ಡೆಹ್ರಾಡೂನ್, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಲಕ್ನೋ, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ರಕ್ಷಾ ಬಂಧನ/ಪಾಂಗ್-ಲಬ್ಸೋಲ್/ಶುಕ್ರವಾರ ಈದ್-ಇ-ಮಿಲಾದ್-ಉಲ್-ನಬಿ/ಶ್ರೀ ನಾರಾಯಣ ಗುರು ಜಯಂತಿ/ಶ್ರೀನಾರಾಯಣ ಗುರು ಜಯಂತಿಯ ನಂತರ ಬ್ಯಾಂಕ್ ಬಂದ್.
* ಆಗಸ್ಟ್ 30: ಭಾನುವಾರ
ಆನ್ಲೈನ್ ಸೇವೆ ಲಭ್ಯ ಇನ್ನು ಬ್ಯಾಂಕ್ಗಳು ರಜೆ ಇರುವ ದಿನ ನೀವು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ವ್ಯವಹರಿಸಬಹುದು. ಯುಪಿಐ ಪೇಮೆಂಟ್ ಆಪ್, ಬ್ಯಾಂಕಿಂಗ್ ಮೊಬೈಲ್ ಅಪ್ಲಿಕೇಷನ್, ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಚಾಲ್ತಿಯಲ್ಲಿರುತ್ತವೆ. ಎಟಿಎಂ ಮೂಲಕ ಅಗತ್ಯ ಹಣ ಪಡೆಯಲೂ ಅವಕಾಶ ಇರುತ್ತದೆ.



