ಅಳದಂಗಡಿ: ಬೆಳ್ತಂಗಡಿ ತಾಲೂಕಿನ ಅಳದಂಗಡಿ ಮುಖ್ಯಪೇಟೆಯ ಹೆದ್ದಾರಿಯಲ್ಲಿ ಇಂದು (ಜು.29) ಸಂಜೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಬೈಕ್ ಸವಾರರು ಪವಾಡಸದೃಶ ಪಾರಾಗಿದ್ದಾರೆ.

ಬೈಕ್ ಸವಾರರು ನಾರಾವಿ ಕಡೆಯಿಂದ ಅಳಂಗಡಿ ಕಡೆಗೆ ಬರುತ್ತಿದ್ದ ವೇಳೆ ಅಳದಂಗಡಿ ಮುಖ್ಯಪೇಟೆ ಸಮೀಪಿಸುತ್ತಿದ್ದಂತೆ ಏಕಾಏಕಿ ರಿಕ್ಷಾವೊಂದು ಅಡ್ಡಬಂದಿದೆ. ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಸವಾರರು ಸುಮಾರು ೩೦ ಅಡಿ ರಸ್ತೆಯಲ್ಲಿ ಎಳೆದಾಡಿಕೊಂಡು ಹೋಗಿದ್ದಾರೆ. ಗಾಯಗಳೊಂದಿಗೆ ಪವಾಡಸದೃಶವಾಗಿ ಸವಾರರು ಜೀವಪಾಯದಿಂದ ಪಾರಾಗಿದ್ದು, ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸವಾರರು ಸ್ಥಳೀಯ ನಿವಾಸಿಗಳು ಎಂದು ತಿಳಿದು ಬಂದಿದೆ.
ರಿಕ್ಷಾ ಚಾಲಕನ ನಿರ್ಲಕ್ಷ್ಯವಾಗಿ ಹೆದ್ದಾರಿಯಲ್ಲಿ ತಿರುವು ಪಡೆದದ್ದೇ ಘಟನೆಗೆ ಕಾರಣವೆನ್ನಲಾಗಿದೆ.



