ಬೆಳ್ತಂಗಡಿ: ಬೆಳ್ತಂಗಡಿ ವಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾರ್ಯದರ್ಶಿಯಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಸೂರಜ್ ಮೇಲಂತಬೆಟ್ಟು ಆಯ್ಕೆ ಆಗಿದ್ದಾರೆ.

ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಮಂಡಳಿ ಮೆಲಂತಬೆಟ್ಟಿನ ಕಾರ್ಯದರ್ಶಿಯಾಗಿ,, ಕೃಷಿಕ ಯುವಕ ಸಂಘ ಮೆಲಂತಬೆಟ್ಟಿನ ಕಾರ್ಯದರ್ಶಿಯಾಗಿ ಈಗಾಗಲೇ ಸೇವಯನ್ನು ನೀಡುತ್ತಿದ್ದಾರೆ.
ಅತ್ಯದ್ಭುತವಾಗಿ ಆಯೋಜನೆಗೊಂಡ ಮೇಲಂತಬೆಟ್ಟಿನ ಭಜನಾ ಕಮ್ಮಟಉತ್ಸವದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯನ್ನು ನೀಡಿದ್ದಾರೆ.
ಬದುಕಿನ ಸಂಸ್ಕಾರಕ್ಕೆ ಭಜನೆಯೇ ಮೂಲ, ರಾಜ್ಯದ್ಯಂತ ಭಜನಾ ಮಂಡಳಿಗಳ ಸಂಘಟನೆಯನ್ನು ಮಾಡಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷವೂ ಕೂಡ ಭಜನಾ ಕಮ್ಮಟವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ.



