ಬೆಳ್ತಂಗಡಿ: ಆರ್ಯಾಪು ಗ್ರಾ.ಪಂನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ನಾಗೇಶ್ ಎಂ ಅವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿರುತ್ತಾರೆ.

ಸದಾ ಹೊಸತನ
ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ನಿವಾಸಿಯಾಗಿರುವ ನಾಗೇಶ್ ಎಂ. ಅವರು 2020ರಲ್ಲಿ ಆರ್ಯಾಪು ಗ್ರಾ.ಪಂಗೆ ಪ್ರಭಾರ ಪಿಡಿಓ ಆಗಿ ವರ್ಗಾವಣೆಗೊಂಡಿದ್ದರು. 2021ರಿಂದ ಪೂರ್ಣಕಾಲಿಕ ಪಿಡಿಓ ಆಗಿ ನೇಮಕಗೊಂಡಿದ್ದರು. ಪಂಚಾಯತ್ನ ಆಡಳಿತದಲ್ಲಿ ಸದಾ ಹೊಸತನವನ್ನು ಅಳವಡಿಕೊಳ್ಳುತ್ತಿದ್ದ ನಾಗೇಶ್ ಅವರು ತನ್ನ ಅವಧಿಯಲ್ಲಿ ಜಲಜೀವನ್ ಮಿಷನ್ನ 4 ಘಟಕ ಸೇರಿದಂತೆ ಒಟ್ಟು 7 ಕುಡಿಯುವ ನೀರಿನ ಘಟಕಗಳಿಗೆ ಪ್ರಥಮ ಬಾರಿಗೆ ಸೋಲಾರ್ ಪಂಪ್ ಅಳವಡಿಸಿ ವಿದ್ಯುತ್ ಶುಲ್ಕದ ಹೊರೆ ಕಡಿತಗೊಳಿಸಿದ್ದರು. ಗ್ರಾಮದ ಸ್ವಚ್ಚತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ನ ಸಿಎಸ್ಆರ್ ಅನುದಾನದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ವೇಸ್ಟ್ ಗ್ಲಾಸ್ ಬಾಟಲ್ ಕ್ರಕ್ಕಿಂಗ್ ಘಟಕ ಸ್ಥಾಪನೆ, ಜಿಲ್ಲೆಯಲ್ಲೇ ವಿನೂತನ ಶೈಲಿಯಲ್ಲಿ ಡಿಜಿಟಲ್ ಬಿಕಾನ್ ಲೈಬ್ರೇರಿ ಸ್ಥಾಪನೆ, ಪ.ಜಾತಿ, ಪ.ಪಂಗಡ 485 ಮನೆಗಳಿಗೆ ಸೋಲಾರ್ ವಿದ್ಯುದೀಕರಣ, ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು ಪೂರೈಸಲು ತಾಲೂಕಿನಲ್ಲೇ ಪ್ರಥಮ ಬಾರಿಗೆ ನೀರಿನ ಘಟಕಗಳಿಗೆ ಸ್ಯಾಂಡ್ ಫಿಲ್ಟರ್ ಅಳವಡಿಕೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ಗ್ರಾಮ ಸಭೆಯಲ್ಲಿ ‘ಗೌರವ ಗ್ರಾಮ ಪುರಸ್ಕಾರ’ ಯೋಜನೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲೆಗಳು, ಅಂಗನವಾಡಿಗಳಿಗೆ ಕ್ರೀಡಾ ಸಾಮಾಗ್ರಿ ವಿತರಣೆ, ಮಹಿಳೆಯ ಸ್ವಾವಲಂಬಿ ಬದುಕಿಗೆ ಪೂರಕವಾಗಿ ಎರಡು ವರ್ಷದಲ್ಲಿ 28 ಮಂದಿಗೆ ಟೈಲರಿಂಗ್ ಯಂತ್ರ ವಿತರಣೆ, ಆಶಾ ಕಾರ್ಯಕರ್ತೆಯರಿಗೆ ಕೊಡೆ, ಬ್ಯಾಗ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸೋಲಾರ್ ಹೋಂ ಲೈಟ್ ವಿತರಣೆ, ಸೆಲ್ಕ ಫೌಂಡೇಷನ್ನ ಸಿಎಸ್ಆರ್ ಅನುದಾನದಲ್ಲಿ ಹಂಟ್ಯಾರು ಹಾಗೂ ಕುಂಜೂರುಪಂಜ ಶಾಲೆಗಳಿಗೆ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ವಿತರಣೆ, ಮೆಡ್ಲ್ಯಾಂಡ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಅಶ್ರಫ್ ಕಮ್ಮಾಡಿಯವರ ಕೊಡುಗೆಯಲ್ಲಿ ಕಚೇರಿಗೆ ಡಿಜಿಟಲ್ ಡಿಸ್ಪೇ, ವಾಟರ್ ಪ್ಯೂರಿಪೈಯರ್, ಪಾಪ್ಯುಲರ್ ಸ್ವೀಟ್ಸ್ ಮತ್ತು ಸೂರ್ಯನಾರಾಯಣ ಭಟ್ ಅವರ ಕೊಡುಗೆಯಲ್ಲಿ ಸಭಾಂಗಣಕ್ಕೆ ಎಸಿ ಅಳವಡಿಸಲಾಗಿದೆ. ಪಂಚಾಯತ್ ಕಚೇರಿಯನ್ನು ಆಧುನಿಕ ಶೈಲಯಲ್ಲಿ ನವೀಕರಣ ಹಾಗೂ ಹವಾನಿಯಂತ್ರಿತ ಸುಭಾಷ್ಚಂದ್ರ ಭೋಸ್ ಸಭಾಂಗಣ ಇವರ ಅವಧಿಯಲ್ಲಿ ನಿರ್ಮಾಣಗೊಂಡಿದೆ.



