ಮೂಡುಬಿದಿರೆ: ಕಾರ್ಕಳ ಕಡೆಯ ಚಿಲಿಂಬಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರೊಂದು ಬೆಳುವಾಯಿ ಥೈಓವರ್ ಆರಂಭದಲ್ಲೇ ಮಳೆನೀರು ನಿಂತಿದ್ದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಚಿಲಿಂಬಿ ಕಡೆಯಿಂದ ಬಂದ ಕಾರು ಬೆಳುವಾಯಿ ಥೈಓವರ್ಗೆ ಪ್ರವೇಶಿಸುವ ಸ್ಥಳದಲ್ಲಿ ಮಳೆನೀರು ನಿಂತಿದ್ದು. ಕಾರು ನೀರಿನ ಮೇಲೆ ಜಾರಿಕೊಂಡು ಕೆಲದೂರ ತೇಲಿದ ಬಳಿಕ ಪತ್ನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದಲ್ಲಿ ಕಾರಿಗೆ ಹಾನಿಯಾಗಿದ್ದು, ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ನೆರವು ನೀಡಿದ್ದಾರೆ. ಫೈಓವರ್ ಆರಂಭದಲ್ಲೇ ಮಳೆನೀರು ನಿಲ್ಲುತ್ತಿರುವುದು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಈ ಸ್ಥಳದಲ್ಲಿ ನೀರು ಸಂಗ್ರಹವಾಗದಂತೆ ಸಂಬಂಧಪಟ್ಟ ಇಲಾಖೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



