ವೇಣೂರು: ವೇಣೂರಿನ ಪ್ರಮೋದ್ ಶೆಟ್ಟಿ ಸಿರಿಮನೆ ಟ್ರೇಡರ್ಸ್ ಮಾಲಕರು ಅವರ ಪುತ್ರಿ ಕುಮಾರಿ ಸೃಷ್ಟಿ ಅವರು ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ ಮಾಂಟೇಸರಿ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತಮ್ಮ ಶಾಲೆಯ ಮೇಲಿನ ಅಭಿಮಾನ, ಪ್ರೀತಿ ಹಾಗೂ ಸಾಮಾಜಿಕ ಕಳಕಳಿಯ ಸಂಕೇತವಾಗಿ ಶಾಲೆಯ ಉಪಯೋಗಕ್ಕಾಗಿ ಎರಡು ಫ್ಯಾನ್ಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ.
ಅವರ ಈ ಉದಾರ, ಶ್ಲಾಘನೀಯ ಹಾಗೂ ಮಾದರಿಯಾದ ಕೊಡುಗೆಯನ್ನು ಕುಂಭಶ್ರೀ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹೃತ್ಪೂರ್ವಕವಾಗಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದೆ. ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ. ಎಚ್., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶುಭ ನಿತೇಶ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಎಲ್. ಎನ್., ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ಭವಾನಿ ದಿವ್ಯ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ಸೌಮ್ಯ ಅವರು ಶ್ರೀ ಪ್ರಮೋದ್ ಶೆಟ್ಟಿ ಹಾಗೂ ಕುಮಾರಿ ಸೃಷ್ಟಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಅವರ ಉದಾರ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಇಂತಹ ಸಮಾಜಮುಖಿ ಸಹಕಾರ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿನ ಕಾಳಜಿಯು ಇತರರಿಗೂ ಪ್ರೇರಣೆಯಾಗಲಿ ಎಂದು ಸಂಸ್ಥೆಯ ವತಿಯಿಂದ ಶುಭ ಹಾರೈಸಲಾಯಿತು.



