ಮೂಡುಬಿದಿರೆ: ಪ್ರಸಾದ್ ಆಳ್ವ ಸಾರಥ್ಯದ ಕುರಾಲ್ ಕಲಾವಿದೆರ್ ಬೆದ್ರ ತಂಡವು ಕಳೆದೆರಡು ವರ್ಷಗಳಲ್ಲಿ ‘ಯೇರ್’ ಹಾಗೂ ‘ತೀರ್ಥ’ ತುಳು ನಾಟಕಗಳ ಮೂಲಕ ಕಲಾಭಿಮಾನಿಗಳ ಮೆಚ್ಚುಗೆ ಪಡೆದಿದ್ದು, ಈ ವರ್ಷದ ನೂತನ ಸತ್ಯಘಟನೆಯ ಆಧಾರಿತ ಭಕ್ತಿಪ್ರಧಾನ ತುಳು ನಾಟಕ ‘ಅಪ್ಪೆ’ ಯ ಶುಭಮುಹೂರ್ತ ಮತ್ತು ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಶೃಂಗೇರಿಯ ಶ್ರೀ ಶಾರದಾಂಬ ವಿದ್ಯಾಪೀಠದಲ್ಲಿ ನಡೆಯಿತು.
ಪ್ರಸಾದ್ ಆಳ್ವ ಪಡುಕೊಣಾಜೆ. ತಂಡದ ಸಮಗ್ರ ನಿರ್ವಾಹಕಿ ಬಾಲಿಕ ಪ್ರಸಾದ್ ಪಡುಕೊಣಾಜೆ, ‘ಅಪ್ಪೆ’ ನಾಟಕದ ಬರಹಗಾರ ಹಾಗೂ ನಿರ್ದೇಶಕ ಯೋಗೀಶ್ ಪೂಜಾರಿ ಪೇರ ಮತ್ತು ನಾಟಕದ ಕಲಾವಿದರು ಉಪಸ್ಥಿತರಿದ್ದರು.
ತುಳುನಾಡಿನ ಸತ್ಯಘಟನೆಯೊಂದನ್ನು ಆಧರಿಸಿ ರೂಪುಗೊಂಡಿರುವ ‘ಅಪ್ಪೆ’ ನಾಟಕದಲ್ಲಿ ತುಳುನಾಡಿನ ಮನೆಮನೆಗಳಲ್ಲಿ ಆರಾಧಿಸಲ್ಪಡುವ ಮಂತ್ರದೇವತೆ ದೈವದ ಕಾರ್ಣಿಕ ಶಕ್ತಿಯ ಅನಾವರಣವಾಗಲಿದೆ. ದೈವಿಕ ಅಂಶಗಳೊಂದಿಗೆ ಹಾಸ್ಯದ ಸನ್ನಿವೇಶಗಳನ್ನೂ ಒಳಗೊಂಡಿರುವ ಈ ನಾಟಕವು ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಭಕ್ತಿಯ ಅನುಭವವನ್ನೂ ನೀಡುವ ಉದ್ದೇಶ ಹೊಂದಿದೆ.
ಅದ್ದೂರಿ ರಂಗವಿನ್ಯಾಸದೊಂದಿಗೆ ಮೂಡಿಬರಲಿರುವ ಈ ನಾಟಕದ ಪ್ರದರ್ಶನಗಳಿಗಾಗಿ ಆಸಕ್ತರು 9606122429 ಹಾಗೂ 9880873953 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.



