ಮೂಡುಬಿದಿರೆ: ಸಮಾಜಸೇವೆ, ಶೈಕ್ಷಣಿಕ ನೆರವು ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿರುವ ನವಚೇತನ ಸೇವಾ ಬಳಗ ತೋಡಾರು ತಂಡವು 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ.
ಅಧ್ಯಕ್ಷರಾಗಿ ಕಿರಣ್ ಕುಲಾಲ್ ಸಾಣೂರು, ಪ್ರಧಾನ ಕಾರ್ಯದರ್ಶಿಯಾಗಿ ಪಲ್ಲವಿ ಅಂಚನ್ ಮಿಜಾರ್ ನೇಮಕಗೊಂಡಿದ್ದಾರೆ. ಗೌರವ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ತೋಡಾರು ಹಾಗೂ ಅರುಣ್ ರೈ ತೋಡಾರು ಮರು ಆಯ್ಕೆಯಾಗಿದ್ದು, ಜಯಕುಮಾರ್ ಪೂಜಾರಿ ತೋಡಾರು ನೂತನ ಗೌರವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಲಕ್ಷ್ಮೀಶ್ ಶೆಟ್ಟಿ ಮಿಜಾರ್, ಕೃಷ್ಣನಂದ ಪೂಜಾರಿ ಹಾಗೂ ಗಣೇಶ್ ಪೂಜಾರಿ ವೇಣೂರು ನೇಮಕಗೊಂಡಿದ್ದಾರೆ.
ನಿರ್ವಹಣಾ ವಿಭಾಗದ ಜವಾಬ್ದಾರಿಯನ್ನು ದಿನಕರ್ ಪೂಜಾರಿ ಮಿಜಾರ್, ದಾಮೋದರ್ ಕುಮಾರ್ ಮಿಜಾರ್ ಹಾಗೂ ದಿನಕರ್ ಅಮೀನ್ ಮಾರ್ನಾಡ್ ವಹಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಕಾಶಿಪಟ್ಟ ಹಾಗೂ ಅಭಿ ಪೂಜಾರಿ ಉಳೆಪಾಡಿ, ಜೊತೆ ಕಾರ್ಯದರ್ಶಿಯಾಗಿ ದಯಾನಂದ ದೇವಾಡಿಗ ವೇಣೂರು ಹಾಗೂ ಕೋಶಾಧಿಕಾರಿಯಾಗಿ ರೋಷನ್ ಪೂಜಾರಿ ಪೆರಿಂಜೆ ಆಯ್ಕೆಯಾಗಿದ್ದಾರೆ. ಪ್ರಚಾರ ವಿಭಾಗದ ಪ್ರಮುಖರಾಗಿ ಅಶೋಕ್ ಪೂಜಾರಿ ಪುತ್ತಿಗೆ. ಸುಮಂತ್ ಕುಲಾಲ್ ಸಾಣೂರು, ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್ ಹಾಗೂ ವಿಜೇತ್ ವಿ. ಪೂಜಾರಿ ಬೆಳುವಾಯಿ ನೇಮಕಗೊಂಡಿದ್ದಾರೆ. ಸುಕೇಶ್ ಜಿ. ಅಂಚನ್ ಅವರ ನೇತೃತ್ವದಲ್ಲಿ ಐದು ವರ್ಷಗಳ ಹಿಂದೆ ಆರಂಭಗೊಂಡ ತಂಡವು ಬಡವರ ಸೇವೆಯೇ ದೇವರ ಸೇವೆ ಎಂಬ ಧೈಯದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ನೂತನ ಪದಾಧಿಕಾರಿಗಳಿಗೆ ಸದಸ್ಯರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ 2025-26ನೇ ಸಾಲಿನ ಪದಾಧಿಕಾರಿಗಳ ಸೇವೆಯನ್ನು ಸ್ಮರಿಸಿ ವಂದಿಸಿ, ಅವರ ನಿಸ್ವಾರ್ಥ ಸೇವೆ ಮತ್ತು ಸಮರ್ಪಣೆಯಿಂದ ಹಲವು ಜನೋಪಯೋಗಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿ ತಂಡಕ್ಕೆ ಜನಮನ್ನಣೆ ದೊರೆತಿದೆ ಎಂದು ಪ್ರಶಂಸಿಸಲಾಯಿತು.



