ಪಡಂಗಡಿ: ಪಡಂಗಡಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ರೂ. 1.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಿವಿಧ ರಸ್ತೆಯ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿದರು.
ಬದ್ಯಾರ್ ಹಾಸ್ಪಿಟಲ್ ರಸ್ತೆ ರೂ. 55 ಲಕ್ಷ, ನೈಕುಳಿ ಕಲೆಂಜೀರೋಡಿ ರಸ್ತೆ 25 ಲಕ್ಷ, ಮಲ್ಲಿಪಾಡಿ ರಸ್ತೆ 25 ಲಕ್ಷ ಹಾಗು ಕಲೆಂಜರೋಡಿ ರಸ್ತೆ 10 ಲಕ್ಷ ಇದರ ಉದ್ಘಾಟನೆಯನ್ನು ಶಾಸಕರು ಸಾಂಕೇತಿಕವಾಗಿ ನೆರವೇರಿಸಿದರು.

ಬಳಿಕ ಚರ್ಚ್ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಪ್ರಾರಂಭದಲ್ಲಿ ಫಾದರ್ ರೋಷನ್ ರವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಬದ್ಯಾರ್ ಪ್ರದೇಶದ ಜನರ ಬಹು ದಿನದ ಬೇಡಿಕೆಗಳನ್ನು ಈಡೇರಿಸಿದ ಶಾಸಕರನ್ನು ಅಭಿನಂದಿಸಿದರು. ನಂತರ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಅನುದಾನದಿಂದ ಹೊಸ ಚರ್ಚಿನ ನೂತನವಾಗಿ ನಿರ್ಮಾನವಾಗುವ ಕಟ್ಟಡಕ್ಕೆ 10 ಲಕ್ಷ ನೀಡುವ ಭರವಸೆಯನ್ನು ನೀಡಿ ಅಲ್ಪಸಂಖ್ಯಾತ ಇಲಾಖೆಯಿಂದ ಅನುದಾನವನ್ನು ನೀಡುದಾಗಿ ಹೇಳಿದರು. ನಂತರ ಸಂತೋಷ್ ಕುಮಾರ್ ಜೈನ್ ಮಾತನಾಡಿ, ಕೊಟ್ಟ ಭರವಸೆಯನ್ನು ಈಡೇರಿಸಿದ ಶಾಸಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರಿಚರ್ಡ್ ಗೋವಿಯಸ್, ಮೀನಾಕ್ಷಿ ಶೆಟ್ಟಿ, ಪಿಯನ್ ವಸಂತಿ, ವನಜಾಕ್ಷಿ ಸಿಸ್ಟರ್, ಪುಷ್ಪರಾಜ್ ಜೈನ್, ಉದಯವರ್ಮ ಜೈನ್ ಚರ್ಚಿನ ಸದಸ್ಯರು ಪಾಲನ ಸಮಿತಿಯ ಉಪಾಧ್ಯಕ್ಷರಾದ ಶಾಂತಿ ಸಂತೋಷ್ ಶೆರಾವು, ಸಿಸ್ಟರ್ ಜಾನೆಟ್, ಸಿಸ್ಟರ್ ಸರಿತಾ, ಸಿಸ್ಟರ್ ವೀಣಾ, ಉಪಸ್ಥಿತರಿದ್ದರು. ಸಂತೋಷ್ ಸೆರಾವು ಧನ್ಯವಾದ ಸಲ್ಲಿಸಿದರು.



