ಕುಕ್ಕೇಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಃಅ ಟ್ರಸ್ಟ್ ಗುರುವಾಯನಕೆರೆ, ಗರ್ಡಾಡಿ ವಲಯದ ಕುಕ್ಕೇಡಿ ಕಾರ್ಯಕ್ಷೇತ್ರದಲ್ಲಿ ಲಕ್ಷ್ಮಣ್ ಪೂಜಾರಿಯವರ ಮನೆಯಲ್ಲಿ ಸಸಿಮಡಿ ಪೂರ್ವ ತಯಾರಿ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆ ನಡೆಯಿತು.

ಯೋಜನೆಯ ಕೃಷಿ ಮೇಲ್ವಿಚಾರಕ ಕೃಷ್ಣ ಅವರು ಸಸಿ ಮಡಿ ಪೂರ್ವತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಟ್ರೇ, ಹಾಗೂ ಮಣ್ಣಿನ ತಯಾರಿ, ಬೀಜೋಪಚಾರ ಸಸಿ ಮಡಿ ಮಾಡುವ ವಿದಾನ, ಹಾಗೂ ನಿರ್ವಹಣೆ ಕುರಿತು ಹಾಗೂ ಸಾಮಾನ್ಯ ನಾಟಿಗೂ ಯಾಂತ್ರಿಕೃತ ಭತ್ತ ಕೃಷಿಗೆ ಇರುವ ವ್ಯತ್ಯಾಸದ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಶ್ರೀಮತಿ ಯಶೋಧ, ಸೇವಾಪ್ರತಿನಿಧಿ ಜ್ಯೋತಿ, ದೀಕ್ಷಿತ್, ಸತೀಶ್, ದಿನೇಶ್, ಅರುಣ್ ಮತ್ತಿತರರು ಉಪಸ್ಥಿತರಿದ್ದರು.



