ಶೌರ್ಯ ವಿಪತ್ತು ತಂಡ, ತುರ್ತು ಸ್ಪಂದನಾ ತಂಡದ ಯಶಸ್ವಿ ಕಾರ್ಯಾಚರಣೆ
ಬೆಳ್ತಂಗಡಿ: ರೆಖ್ಯ ಗ್ರಾಮದ ದೇವಸ ಎಂಬಲ್ಲಿಗೆ ಸಂಬಂಧಿಕರ ಮನೆಗೆ ಆಗಮಿಸಿದ್ದ ವ್ಯಕ್ತಿಯೋರ್ವರು ನಿಗೂಢವಾಗಿ ನಾಪತ್ತೆಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡ ಹಾಗೂ ತುರ್ತು ಸ್ಪಂದನಾ ತಂಡದ ಸದಸ್ಯರ ನಿರಂತರ ಹುಡುಕಾಟದ ಬಳಿಕ ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪದ ಉದನೆ ಹೊಳೆಯ ಸಮೀಪದಲ್ಲಿ ನಿತ್ರಾಣವಾಗಿ ಕುಳಿತಿದ್ದ ಅಶ್ವಿತ್ ಕುಮಾರ್ ಅವರನ್ನು ಯುವಕರು ಪತ್ತೆಹಚ್ಚಿದ್ದಾರೆ.
ರೆಖ್ಯ ಗ್ರಾಮದ ದೇವಸ ಎಂಬಲ್ಲಿಗೆ ಸಂಬಂಧಿಕರ ಮನೆಗೆ ಆಗಮಿಸಿದ್ದ ನೆಲ್ಯಾಡಿ ಪಾಲೇತ್ತಾಡಿ ನಿವಾಸಿ ಅಶ್ವಿತ್ ಕುಮಾರ್ (೩೭) ಅವರು ಮೇ ೧೭ ರಂದು ಸಂಜೆ ೪.೧೫ರ ಬಳಿಕ ಕಣ್ಮರೆಯಾಗಿದ್ದರು.
ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಸಿಗದೇ ಇದ್ದಾಗ ಆತಂಕಗೊಂಡ ಕುಟುಂಬದವರು ಪತ್ತೆ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸಹಕಾರ ಕೇಳಿದ್ದರು. ಕೂಡಲೇ ಸ್ಪಂದಿಸಿದ ಶಿಶಿಲ ಅರಶಿನಮಕ್ಕಿ ಘಟಕದ ಸ್ವಯಂಸೇವಕರು ಹುಡುಕಾಟ ನಡೆಸಿದ್ದರು. ನಾಪತ್ತೆಯಾಗಿದ್ದ ಮಾರನೆಯ ದಿನ ಶೌರ್ಯ ತಂಡದ ಸ್ವಯಂಸೇವಕರು ಮತ್ತು ಸ್ಥಳೀಯರು ಸುತ್ತಲಿನ ಅರಣ್ಯ ಪ್ರದೇಶ, ನದಿ, ಗುಡ್ಡಗಾಡು, ಕೆರೆ ಮತ್ತಿತರ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಹುಡುಕಿದರೂ ಪತ್ತೆಯಾಗಿರಲಿಲ್ಲ.
ಕಾಣೆಯಾಗಿ (೧೯.೦೫.೨೦೨೬) ೩ ನೇ ದಿನವಾಗಿದ್ದು ಶೌರ್ಯ ತಂಡದ ಸದಸ್ಯರು, ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸದಸ್ಯರು ಹಾಗೂ ಸ್ಥಳೀಯರು ಬೆಳಿಗ್ಗೆಯಿಂದಲೇ ಹುಡುಕುವ ಕಾರ್ಯಾಚರಣೆ ನಡೆಸಿದ್ದರು.
ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪದ ಉದನೆ ಹೊಳೆಯ ಸಮೀಪದಲ್ಲಿ ಮಧ್ಯಾಹ್ನ ಸುಮಾರು ೨.೧೫ ರ ವೇಳೆಗೆ ತ್ರಾಣವಾಗಿ ಕುಳಿತಿದ್ದ ಅಶ್ವಿತ್ ಕುಮಾರ್ ಅವರನ್ನು ಯುವಕರು ಪತ್ತೆಹಚ್ಚಿದ್ದಾರೆ.
ಎರಡು ದಿನದ ಬಳಿಕ ದೊರೆತ ಅಶ್ವಿನ್ ಅವರು ತ್ರಾಣಗೊಂಡಿದ್ದು ಅವರನ್ನು ಸ್ಥಳೀಯರು ಹಾಗೂ ಶೌರ್ಯ ತಂಡದ ಸದಸ್ಯರು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.
ಎರಡು ದಿನಗಳ ಹುಡುಕಾಟ ನಡೆಸಲು ಶ್ರಮಿಸಿದ ಸ್ವಯಂಸೇವಕರಿಗೆ ಅಶ್ವಿನ್ ಕುಮಾರ್ ಅವರ ಕುಟುಂಬದ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ರ್ವಹಣಾಧಿಕಾರಿಯವರಾದ ಶ್ರೀ ಅಲ್ ಕುಮಾರ್ ಎಸ್.ಎಸ್ ರವರು ಸ್ವಯಂಸೇವಕರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ವಯಂಸೇವಕರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಶೌರ್ಯ ವಿಪತ್ತು ರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ ಇವರ ನೇತ್ರತ್ವದಲ್ಲಿ ಶಿಶಿಲ ಅರಶಿನಮಕ್ಕಿ ಘಟಕದ ಸ್ವಯಂಸೇವಕರು ಯಶಸ್ವೀ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಘಟಕ ಪ್ರತಿಧಿ ಸುಲೈಮಾನ್, ರವೀಂದ್ರ, ಘಟಕ ಸಂಯೋಜಕಿ ರಶ್ಮಿತಾ ಹಾಗೂ ಸದಸ್ಯರು ಭಾಗವಹಿಸಿದ್ದರು.





