ಮೇ 24ರಂದು ಸಂಭ್ರಮಾಚರಣೆ, ಬೃಹತ್ ಬೈಕ್ ರ್ಯಾಲಿ-ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ
ಕುಕ್ಕೇಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮಶಾಖೆ ಕುಕ್ಕೇಡಿ-ನಿಟ್ಟಡೆ ಇದರ ಬೆಳ್ಳಿಹಬ್ಬದ ಸಂಭ್ರಮಾಚರಣೆ ಹಾಗೂ ಬುದ್ಧ ಬಸವ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮವು ಮೇ 24ರಂದು ಕುಕ್ಕೇಡಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಸಂಜೆ 5-30ರಿಂದ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ದಸಂಸ ಗ್ರಾಮಶಾಖೆಯ ಸಂಚಾಲಕರಾಗಿರುವ ಹರೀಶ್ ಫಂಡಿಜೆ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕರಾಗಿರುವ ಡಾ. ಶಿವಕುಮಾರ್ ಅವರು ಉದ್ಘಾಟನೆ ನೆರವೇರಲಿದ್ದಾರೆ. ದಸಂಸದ ಮೈಸೂರು ವಿಭಾಗೀಯ ಸಂಘಟನ ಸಂಚಾಲಕರಾಗಿರುವ ಬಿ.ಕೆ. ವಸಂತ ಬೆಳ್ತಂಗಡಿ, ದಸಂಸ ತಾಲೂಕು ಶಾಖೆಯ ಪ್ರಧಾನ ಸಂಚಾಲಕರಾಗಿರುವ ರಮೇಶ್ ಆರ್., ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್, ಕುಕ್ಕೇಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರು, ಮಂಗಳೂರು ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೃಹತ್ ಬೈಕ್ ರ್ಯಾಲಿ
ಬುದ್ಧ ಬಸವ ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂದು ಅಪರಾಹ್ನ 3-27ಕ್ಕೆ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದ ಬಳಿಯಿಂದ ಕುಕ್ಕೇಡಿ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 6-27ರಿಂದ ಕಲೆ ಮತ್ತು ಅಂಬೇಡರ್ ಚಳುವಳಿಯ ಹಿನ್ನಲೆಯನ್ನೊಳಗೊಂಡ ವಿವಿಧ ರೂಪಕಗಳ ಸಾಂಸ್ಕೃತಿಕ ಸೌರಭ ಮತ್ತು ಪ್ರತಿಭಾ ಕಲರವ ನಡೆಯಲಿದೆ ಆಯೋಜಕರ ಪ್ರಕಟಣೆ ತಿಳಿಸಿದೆ.





