ವೇಣೂರು: ಕುಲಾಲ ಫ್ರೆಂಡ್ಸ್ ಕುಂಡದಬೆಟ್ಟು ಇದರ ವತಿಯಿಂದ ಪ್ರಥಮ ಬಾರಿಗೆ ಕುಲಾಲ ಬಾಂಧವರಿಗೆ ಬಿಡ್ಡಿಂಗ್ ಮಾದರಿಯ ಸರ್ವಜ್ಞ ಟ್ರೋಫಿ-೨೦೨೬ ಕ್ರೀಡಾಕೂಟವು ಎ. 26ರಂದು ಬೆಳಿಗ್ಗೆ 10-00ಗಂಟೆಯಿಂದ ಕುಕ್ಕೇಡಿಯ ಗೋಳಿಯಂಗಡಿ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಹಲವು ಅತಿಥಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೋಳಿಯಂಗಡಿ ಮೂಲ್ಯರ ಯಾನೆ ಕುಂಬಾರರ ಸಂಘ ಕುಂಭನಿಧಿ ಇದರ ಅಧ್ಯಕ್ಷರಾದ ಹರೀಶ್ ಕುಲಾಲ್ ಪೆರ್ಮುಡ ವಹಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತೇಜಸ್- 8105757673, ಜಯಪ್ರಕಾಶ್ 7760382086, ಭವನೀಶ್ 8762637497 ಅಥವಾ ಶ್ರೇಯಸ್ 7204017931 ಅವರನ್ನು ಸಂಪರ್ಕಿಸಬಹುದಾಗಿದೆ.





