ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಷನಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೂಡುಬಿದಿರೆ ಯುವವಾಹಿನಿ ಘಟಕದ ಸದಸ್ಯ ರಂಜಿತ್ ಪೂಜಾರಿ ಕಲ್ಲಬೆಟ್ಟು ಭಾಗವಹಿಸಿ ವಿಜೇತರಾಗಿದ್ದಾರೆ.
ಕಲ್ಲಬೆಟ್ಟುವಿನ ಶೇಖರ್ ಮತ್ತು ಹೇಮಾವತಿ ದಂಪತಿಯ ಪುತ್ರನಾಗಿದ್ದು, ಕ್ರೀಡಾ ಸಾಧನೆಯ ಮೂಲಕ ಈ ಭಾಗಕ್ಕೆ ಹೆಮ್ಮೆ ತಂದಿದ್ದಾರೆ. ಈ ಸಾಧನೆಯನ್ನು ಗುರುತಿಸಿ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.





