ವೇಣೂರು: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಇಂದು ಮಧ್ಯಾಹ್ನ ರಥದಲ್ಲಿ ಮಹಾಪೂಜೆ, ರಥೋತ್ಸವ ಜರಗಿತು.
ಕ್ಷೇತ್ರದ ವಿಕಾಸ್ ಜೈನ್ ಹಾಗೂ ವಿಶ್ವಾಸ್ ಜೈನ್ ಸಕಲ ವ್ಯವಸ್ಥೆಗೆ ಮಾರ್ಗದರ್ಶನ ಮಾಡಿದರು.



ಇಂದು ರಾತ್ರಿ 11-00 ಗಂಟೆಯಿಂದ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ರೀತಿ ರಿವಾಜು ಕಟ್ಟುಕಟ್ಟಳೆಯಂತೆ ಕ್ಷೇತ್ರದ ಅನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್ ಅವರ ಉಪಸ್ಥಿತಿಯಲ್ಲಿ, ಮಾರೂರು ಖಂಡಿಗದ ವೇ.ಮೂ. ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.





