ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಆಹೋರಾತ್ರಿ ಭಜನೋತ್ಸವ ನಡೆಯಿತು. ನೂರಾರು ಮಂದಿ ಭಕ್ತರು ಆಗಮಿಸಿ ಶತರುದ್ರಾಭಿಷೇಕ ನೆರವೇರಿಸಿದರು.
ಬೆಳಿಗ್ಗೆ 6-50ಕ್ಕೆ ಭಜನೆ ಆರಂಭಗೊಂಡು ಇಂದು ಸೋಮವಾರ ಬೆಳಿಗ್ಗೆ ಸೂರ್ಯೋದಯಕ್ಕೆ ಭಜನಾ ಮಂಗಲ ನೆರವೇರಿತು. ರಾತ್ರಿ ಶ್ರೀ ದೇವರ ಮಹಾಶಿವರಾತ್ರಿ ಉತ್ಸವ ಜರಗಿತು. ಸುಮಾರು 22 ಭಜನ ತಂಡಗಳು ಭಜನೆ ಸೇವೆ ನಡೆಸಿಕೊಟ್ಟರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ದಂಪತಿಯವರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕ್ಷೇತ್ರದ ಪ್ರಧಾನ ಅರ್ಚಕರಾದ ಟಿ.ವಿ. ವಿಷ್ಣುಮೂರ್ತಿ ಭಟ್ ಅವರ ಪೌರೋಹಿತ್ಯದಲ್ಲಿ ವಿಶೇಷ ಪೂಜೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದು, ಸಹಕರಿಸಿದರು.





