ಬೆಂಗಳೂರು: ರಾಜ್ಯದಲ್ಲಿ 2026 ವರ್ಷದ ಮೊದಲ ಜಂಟಿ ಅಧಿವೇಶನ ಆರಂಭವಾಗಿದೆ. ‘ಜಿ ರಾಮ್ ಜಿ’ ಯೋಜನೆ ಹೆಸರು ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ ಅದನ್ನು ಅಧಿವೇಶನದ ಮೊದಲ ದಿನದ ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು. ಆದರೆ ಭಾಷಣ ಓದದೇ ರಾಜ್ಯಪಾಲರು ಅಧಿವೇಶನದಿಂದ ಹೊರ ನಡೆದರು. ಅವರ ಈ ನಡೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕರ ಪೈಕಿ ಮಾಜಿ ಸಚಿವ ಬಿ.ಕೆ ಹರಿಪ್ರಸಾದ್ ರಾಜ್ಯಾಪಾಲರನ್ನು ಅಡ್ಡಿಗಟ್ಟಿ ತಡೆಯಲು ಮುಂದಾದ ಬೆಳವಣಿಗೆ ಗುರುವಾರ ಸದನದಲ್ಲಿ ನಡೆಯಿತು.





