ಬೆಳ್ತಂಗಡಿ : ಮಂಗಳೂರು -ವಿಲ್ಲಂಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ-ಉಜಿರೆ ಸಂಪರ್ಕ ರಸ್ತೆಯಲ್ಲಿ ತೇಪೆ ಕಾರ್ಯ ನಡೆಯುತ್ತಿರುವ ಪರಿಣಾಮ ಬೆಳ್ತಂಗಡಿ ಪಟ್ಟಣದಿಂದ ಕೊಯ್ಯುರು ಕ್ರಾಸ್ ವರೆಗೆ ವಾಹನ ದಟ್ಟಣೆ ಹೆಚ್ಚಾಗಿ ಸವಾರರು ಪರದಾಡಿದ ಘಟನೆ ನ.10 ರಂದು ಸಂಭವಿಸಿದೆ.
ಸೋಮವಾರ ಬೆಳ್ತಂಗಡಿಯಲ್ಲಿ ವಾರದ ಸಂತೆ ವ್ಯಾಪಾರ ನಡೆಯುತ್ತದೆ ಇದರ ಪರಿಣಾಮ ಆಗಾಗ ಸೋಮವಾರ ಟ್ರಾಫಿಕ್ ಜಾಮ್ ಆಗುವುದು ಸರ್ವೇ ಸಾಮಾನ್ಯ ಆದರೆ, ವಾಹನ ದಟ್ಟಣೆ ಇರುವ ದಿನದಂದೇ ತೇಪೆ ಕಾರ್ಯ ಕೈಗೊಂಡಿದ್ದು, ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ತೊಂದರೆ ಅನುಭವಿಸುವಂತಾಯಿತು.





