ಬೆಳ್ತಂಗಡಿ: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಸಮಾರಂಭವನ್ನು ಜೂ.28ರಂದು ಹಮ್ಮಿಕೊಳ್ಳಲಾಗಿದೆ.
ಶಾಸಕ ಹರೀಶ್ ಪೂಂಜ ಅವರ ನೇತೃತ್ವದ ಶ್ರಮಿಕಾ ಸೇವಾ ಟ್ರಸ್ಟ್ನಿಂದ ತಾಲೂಕಿನಾದ್ಯಂತ ಒಟ್ಟು ಮೂರು ವಿವಿಧ ಕೇಂದ್ರಗಳಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳನ್ನು ಆಧರಿಸಿ ಮೂರು ಪ್ರತ್ಯೇಕ ಸಮಯ ಹಾಗೂ ಸ್ಥಳಗಳಲ್ಲಿ
ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ
ಅಳದಂಗಡಿ ಮತ್ತು ನಾರಾವಿ ಮಹಾಶಕ್ತಿ ಕೇಂದ್ರ ವ್ಯಾಪ್ತಿ: ಬೆಳಿಗ್ಗೆ 9 ಗಂಟೆಗೆ, ಸ್ವರಾಜ್ ಟವರ್ಸ್ ಸಭಾಭವನ, ಅಳದಂಗಡಿ, ಒಳಪಡುವ ಗ್ರಾಮಗಳು: ಬಡಗಕಾರಂದೂರು, ಪಿಲ್ಯ, ಸುಲೈರಿಮೊಗ್ರು, ಸುಕ್ಕೇರಿ, ನಾವರ, ಕುದ್ಯಾಡಿ, ಬಳೆಂಜ, ನಾಲ್ಕೂರು, ತೆಂಕಕಾರಂದೂರು, ಗರ್ಡಾಡಿ, ಪಡಂಗಡಿ, ಕುಕ್ಕೇಡಿ, ನಿಟ್ಟಡೆ, ಮೇಲಂತಬೆಟ್ಟು, ಸವಣಾಲು, ಮುಂಡೂರು, ಶಿರ್ಲಾಲು, ಕರಂಬಾರು, ನಾರಾವಿ, ಕುತ್ತೂರು, ಸಾವ್ಯ, ಅಂಡಿಂಜೆ, ಕೊಕ್ರಾಡಿ, ಕಾಶಿಪಟ್ಟ, ಮರೋಡಿ, ಪೆರಾಡಿ, ಹೊಸಂಗಡಿ, ಬಡಕೋಡಿ, ಆರಂಬೋಡಿ, ಗುಂಡೂರಿ, ಬಜಿರೆ, ಕರಿಮಣೇಲು, ಮೂಡುಕೋಡಿ ಮತ್ತು ವೇಣೂರು, ಕಣಿಯೂರು, ಕುವೆಟ್ಟು
ಬೆಳ್ತಂಗಡಿ ನಗರ ಮಹಾಶಕ್ತಿ ಕೇಂದ್ರ ವ್ಯಾಪ್ತಿ: ಬೆಳಿಗ್ಗೆ 11 ಗಂಟೆಗೆ, ಸ್ಥಳ: ಸಂಗಮ ಸಭಾಭವನ, ಲಾಯಿಲ, ಒಳಪಡುವ ಗ್ರಾಮಗಳು: ತಣ್ಣೀರುಪಂಥ, ಬಾರ್ಯ, ಕರಾಯ, ತೆಕ್ಕಾರು, ಪುತ್ತಿಲ, ಬಂದಾರು, ಉರುವಾಲು, ಕಣಿಯೂರು, ಮೊಗ್ರು, ಇಳಂತಿಲ, ಕಳಿಯ, ನ್ಯಾಯತರ್ಪು, ಮಚ್ಚಿನ, ಪಾರೆಂಕಿ, ಕುಕ್ಕಳ, ಓಡಿಲ್ನಾಳ, ಸೋಣಂದೂರು, ಮಾಲಾಡಿ, ಕುವೆಟ್ಟು, ಕೊಲ್ಲೂರು ಹಾಗೂ ಬೆಳ್ತಂಗಡಿ ನಗರ ಪ್ರದೇಶಗಳು,
ಉಜಿರೆ, ಲಾಯಿ ಹಾಗೂ ಧರ್ಮಸ್ಥಳ ಮಹಾಶಕ್ತಿ ಕೇಂದ್ರ ವ್ಯಾಪ್ತಿ: ಅಪರಾಹ್ನ 2 ಗಂಟೆಗೆ, ಸ್ಥಳ: ಅನುಗ್ರಹ ಸಭಾಭವನ, ಉಜಿರೆ, ಒಳಪಡುವ ಗ್ರಾಮಗಳು: ಲಾಯಿಲ, ನಡ, ಕನ್ಯಾಡಿ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ನೆರಿಯ, ಪುದುವೆಟ್ಟು, ಕಲ್ಮಂಜ, ಉಜಿರೆ, ಬೆಳಾಲು, ಧರ್ಮಸ್ಥಳ, ಪಟ್ರಮೆ, ಕಳೆಂಜ, ನಿಡ್ಲೆ, ಶಿಬಾಜೆ, ಶಿಶಿಲ, ರೆಖ್ಯಾ, ಹತ್ಯಡ್ಕ ಮತ್ತು ಕೊಕ್ಕಡ.



