ಏಸುವಿನ ಮಾನವೀಯ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ಫಾ. ಎಡ್ವಿನ್ ಸಂತೋಷ್ ಮೋನಿಸ್
ವೇಣೂರು: ಯೇಸು ಸ್ವಾಮಿ ಬೋಧಿಸಿದ ಪ್ರೀತಿ, ಕರುಣೆ, ಕ್ಷಮೆ ಮತ್ತು ಮಾನವೀಯತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ವೇಣೂರು ಚರ್ಚಿನ ಧರ್ಮಗುರುಗಳಾದ ಫಾ. ಎಡ್ವಿನ್ ಸಂತೋಷ್ ಮೋನಿಸ್ ಹೇಳಿದರು.
ಅವರು ವೇಣೂರಿನಲ್ಲಿ ಜರಗಿದ ಕ್ರಿಸ್ಮಸ್ ಸೌಹಾರ್ದ ಕೂಟದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ಚಿಂತಕ ಅರವಿಂದ ಚೊಕ್ಕಾಡಿ, ಖತೀಬರಾದ ಮುಹಮ್ಮದ್ ಔಹರ್ ಅಹ್ ಹನಿ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಧಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎ. ಜಯರಾಮ ಶೆಟ್ಟಿ ಭಾಗವಹಿಸಿದ್ದರು.

ಚರ್ಚ್ ಪಾಲನ ಪರಿಷತ್ ಉಪಾಧ್ಯಕ್ಷ ಡೆನಿಸ್ ಸಿಕ್ವೇರ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಜೆತ್ರುದ್ ಡಿ ಸೋಜ ವಂದಿಸಿದರು. ಶಿಕ್ಷಕ ವಿನೋದ್ ಮೋನಿಸ್ ನಿರ್ವಹಿಸಿದರು. ವಿವಿಧ ಧರ್ಮಗಳ ಗಣ್ಯರು ಉಪಸ್ಥಿತರಿದ್ದರು. ಸ್ಥಳೀಯ ಕೆಥೋಲಿಕ್ ಸಭಾ ಅಧ್ಯಕ್ಷ ಅರುಣ್ ಡಿ ಸೋಜ, ಐಸಿವೈಎಂ ಅಧ್ಯಕ್ಷೆ ಕು. ಜೆಸ್ವಿನ್ ಲೋಬೊ, ಚರ್ಚಿನ ಮಾಜಿ ಉಪಾಧ್ಯಕ್ಷರಾದ ಎಲ್.ಜೆ ಫೆರ್ನಾಂಡಿಸ್ ಮತ್ತು ತೋಮಸ್ ರೆಮಿ ನೊರೋನ್ಹ ಸಹಕರಿಸಿದರು.
ವರದಿ: ಎಚ್. ಮಹಮ್ಮದ್ ವೇಣೂರು






