ಬಜಿರೆ ಪಿಎಂಶ್ರೀ ಶಾಲೆ ವಿದ್ಯಾರ್ಥಿಗಳ ಮುಂದಾಳತ್ವ; ಬಿಗ್ಬಾಸ್ ಮಾದರಿಯ ಸ್ಪರ್ಧೆ
ವೇಣೂರು: ಗ್ರಾಮ ಪಂಚಾಯತ್ ವೇಣೂರು ಅರಿವು ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ, ಇದರ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ, ಕನಕದಾಸ ಜಯಂತಿ, ಮಕ್ಕಳ ದಿನಾಚರಣೆ, ಗ್ರಂಥಾಲಯ ಸಪ್ತಾಹ ಸಮಾರಂಭವು ಇತ್ತೀಚೆಗೆ ಜರಗಿತು.

ಈ ಸಮಾರಂಭದಲ್ಲಿ ಬಿಗ್ಬಾಸ್ ಮಾದರಿಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯನ್ನು ಪಿಎಂಶ್ರೀ ಶಾಲೆ ಬಜಿರೆ ಇವರ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಣಬೆಟ್ಟು ಇವರು ಪ್ರಥಮ ಸ್ಥಾನವನ್ನು ಮತ್ತು ದ್ವಿತೀಯ ಸ್ಥಾನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಉಂಬೆಟ್ಟು ಮೂಡುಕೋಡಿ ಹಾಗೂ ತೃತೀಯ ಸ್ಥಾನವನ್ನು ಸಂತ ಜೂಡರ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಕರಿಮಣೇಲು ಇವರು ಪಡೆದರು.






