ವೇಣೂರು: ಕರಿಮಣೇಲು ಗ್ರಾಮದ ಬೋಳಾರಗುತ್ತು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಉಳಾಯಿ-ಪಿದಾಯಿ ಜೂಜಾಟ ಆಡುತ್ತಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ. 17 ರಂದು ರಾತ್ರಿ 7:30 ಕ್ಕೆ ದಾಳಿ ಮಾಡಿ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂಜಾಟ ಆಡುತ್ತಿದ್ದ ಪಡಂಗಡಿಯ ಅಶೋಕ್ (37) ಪಡಂಗಡಿಯ ವಿತೇಶ್ (33), ವೇಣೂರು ಕರಿಮಣೇಲಿನ ರಾಜೇಶ್ (35), ವೇಣೂರು ಕತ್ತೋಡಿಬೈಲಿನ ರಮೇಶ್ (40), ಕುಕ್ಕೇಡಿ ಬರ್ನತ್ಯಾರಿನ ರಾಜೇಶ್ (42), ಕಾರ್ಕಳ ಮುಗಿರಡ್ಡಸ ಪ್ರಮೀತ್ (35), ನಾರಾವಿ ಅರಸಿಕಟ್ಟೆಯ ಕರುಣಾಕರ (38), ವೇಣೂರು ಶಿವಾಜಿನಗರದ ಶೇಖರ್ (50) ಮರೋಡಿಯ ಸಧಾಕರ (42), ಗರ್ಡಾಡಿಯ ನವಾಜ್ (26), ಗೇರುಕಟ್ಟೆ ಜನತಾಕಾಲೋನಿಯ ಇಕ್ಯಾಲ್ (37), ಕುಕ್ಕೇಡಿಯ ಕಿರಣ್ (35), ವೇಣೂರು ಶಿವಾಜಿನಗರದ ಲಕ್ಷ್ಮಣ (51), ಬೆಳ್ತಂಗಡಿ ಲಾಯಿಲದ ನಿಸಾರ್ (47), ಬೆಳ್ತಂಗಡಿ ತೆಂಕಎಡಪದವು ಜೀವಂಧರ್ ಕುಮಾರ್ (36), ಗುರುವಾಯನಕೆರೆಯ ಸಂತೋಷ್ (37), ಸೊಣಂದೂರು ಅಬ್ದುಲ್ ಅಜೀಜ್ (40) ಬಂಧಿತ 17 ಮಂದಿ ಆರೋಪಿಗಳು.





