ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ, ಶತರುದ್ರಾಭಿಷೇಕ ಹಾಗೂ ಆಹೋರಾತ್ರಿ ಭಜನೋತ್ಸವವು ಫೆ. 15ರಂದು ಜರಗಲಿದೆ.
ಅಂದು ಬೆಳಿಗ್ಗೆ ಸೂರ್ಯೋದಯಕ್ಕೆ ದೀಪ ಪ್ರಜ್ವಲನೆಯೊಂದಿಗೆ ಭಜನೆ ಆರಂಭವಾಗಲಿದ್ದು, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ 6-00 ಗಂಟೆಯಿಂದ ನಗರ ಭಜನಾ ಸಂಕೀರ್ತನೆ ಹೊರಟು ರಾತ್ರಿ 9-00 ಗಂಟೆಯಿಂದ ಶ್ರೀ ದೇವರ ಮಹಾ ಶಿವರಾತ್ರಿ ಉತ್ಸವ ನಡೆಯಲಿದೆ. ರಾತ್ರಿ11-30ಕ್ಕೆ ಮಹಾಪೂಜೆ, ಫೆ. 16ರಂದು ಬೆಳಿಗ್ಗೆ ಸೂರ್ಯೋದಯಕ್ಕೆ ಭಜನಾ ಮಂಗಲ ನಡೆಯಲಿದೆ.
ಶಿವರಾತ್ರಿಯಂದು ಕ್ಷೇತ್ರದಲ್ಲಿ ಶತರುದ್ರಾಭಿಷೇಕ, ಶಿವರಾತ್ರಿ ವಿಶೇಷಪೂಜೆ, ಜಾಮ ಪೂಜೆ ಹಾಗೂ ರುದ್ರಾಭಿಷೇಕ ಸೇವೆಗಳು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎ. ಜಯರಾಮ್ ಶೆಟ್ಟಿ ಅವರು ಆಡಳಿತ ಸಮಿತಿ ಪರವಾಗಿ ವಿನಂತಿಸಿದ್ದಾರೆ.





