ವೇಣೂರು: ಇಲ್ಲಿಯ ಧನಲಕ್ಷ್ಮೀ ಟ್ರೇಡಿಂಗ್ ಕಂಪೆನಿ ವತಿಯಿಂದ ಎಲೆಕ್ಟ್ರಿಶಿಯನ್ ಮೀಟ್ ಕಾರ್ಯಕ್ರಮವು ಇತ್ತೀಚೆಗೆ ವೇಣೂರಿನಲ್ಲಿ ನಡೆಯಿತು.
ಕಂಪೆನಿ ಹಾಗೂ ಉತ್ಪನ್ನದ ಬಗ್ಗೆ ಚೇತನ್ ಅವರು ಮಾಹಿತಿ ನೀಡಿದರು. ಫೈಬ್ರೋಸ್ ಕಂಪೆನಿಯ ಮಾರಾಟ ಅಧಿಕಾರಿ ಹಿತೇಶ್ ಮತ್ತು ಧನಲಕ್ಷ್ಮೀ ಟ್ರೇಡಿಂಗ್ ಕಂಪೆನಿಯ ಮಾಲಕರಾದ ಬಿ. ಮಂಜುನಾಥ ನಾಯಕ್ ಅವರು ಎಲೆಕ್ಟ್ರಿಶಿಯನ್ಗಳಿಗೆ ಗಿಫ್ಟ್ ವಿತರಣೆ ಮಾಡಿದರು.
ವೇಣೂರು ಹಾಗೂ ಸ್ಥಳೀಯ ಪರಿಸರದ ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಪ್ರಸಿದ್ಧ ಎಲೆಕ್ಟ್ರಿಶಿಯನ್ ಗುತ್ತಿಗೆದಾರರು ಹಾಗೂ ಎಲೆಕ್ಟ್ರಿಶಿಯನ್ಗಳು ಉಪಸ್ಥಿತರಿದ್ದರು.





