ವೇಣೂರು: ಇಲ್ಲಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾ ದಿನಾಚರಣೆ ಸಮಾರಂಭವು ಇಂದು ಕಾಲೇಜು ಸಭಾಂಗಣದಲ್ಲಿ ನೆರವೇರಿತು.
ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿ.ಇ. ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇಣೂರು ವರ್ತಕರ ಸಂಘದ ಅಧ್ಯಕ್ಷರಾದ ಕೆ. ಭಾಸ್ಕರ ಪೈ, ವೇಣೂರು ಗ್ರಾ.ಪಂ. ಸದಸ್ಯರಾದ ಪುಷ್ಪಾ ಡಿ., ನೇಮಯ್ಯ ಕುಲಾಲ್, ಸಂಭಾಷಿಣಿ ಉದಯ ಕುಮಾರ್, ಹಾಗೂ ರಾಜೇಶ್ ಮೂಡುಕೋಡಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಗಂಗಾಧರ್ ಅವರು ಸ್ವಾಗತಿಸಿದರು.





