ಹೊಸಂಗಡಿ: ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮ ಡಿ. 4, ಬೆಳಿಗ್ಗೆ 9-30ರಿಂದ ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಪಡ್ಡಂದಡ್ಕ ಸಹಿಪ್ರಾ ಶಾಲೆಯ ಶಾಲಾಸಿದ್ದತಾ ಕೇಂದ್ರದಲ್ಲಿ ನಡೆಯಲಿದೆ.
ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಗ್ರಾ.ಪಂ. ಹೊಸಂಗಡಿ, ಶಾಲಾ ಸಿದ್ದತಾ ಕೇಂದ್ರ ಪಡ್ಡಂದಡ್ಡ, ಸಮೂಹ ಸಂಪನ್ಮೂಲ ಕೇಂದ್ರ, ಅಂಡಿಂಜೆ, ಬಜಿರೆ ,ಬಂಗಾಡಿ, ನಾರಾವಿ, ನಿಟ್ಟಡೆ, ಪಡ್ಡಂದಡ್ಕ ಮತ್ತು ಪೆರೋಡಿತ್ತಾಯಕಟ್ಟೆ ಮತ್ತು ಎಸ್ಡಿಎಂಸಿ ಸಹಿಪ್ರಾ ಶಾಲೆ ಪಡ್ಡಂದಡ್ಕ, ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ವೇಣೂರು, ವಿವೇಕಾನಂದ ಸೇವಾ ಟ್ರಸ್ಟ್ ವೇಣೂರು ಹಾಗೂ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.









