ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಾರಿಗೆ ನೌಕರರು ‘ಬೆಂಗಳೂರು ಚಲೋ’ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಆದ್ರೆ, ಪ್ರತಿಭಟನೆಗೂ ಒಂದು ದಿನ ಮೊದಲೇ ರಾಜ್ಯ ಸರ್ಕಾರ ಕೆಲ ತೀರ್ಮಾನಗಳನ್ನು ಕೈಗೊಂಡಿದೆ. ಆದರೂ ಪಟ್ಟು ಸಾರಿಗೆ ನೌಕರರು ಇಂದು ಮುಷ್ಕರ ನಡೆಸಿದ್ದು, ಅಂತಿಮವಾಗಿ ನಡೆದ ಸಂಧಾನಸಭೆ ಯಶಸ್ವಿಯಾಗಿದೆ. ಆದ್ರೆ, ಸರ್ಕಾರಕ್ಕೆ ಸಾರಿಗೆ ನೌಕರರು ಮತ್ತೊಂದು ಡೆಡ್ಲೈನ್ ಕೊಟ್ಟಿದ್ದಾರೆ.





