ವೇಣೂರು: ಪೆರಿಂಜೆಯ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಮಾ. 14ರಿಂದ 19ರ ಪರ್ಯಂತ ವರ್ಷಾವಧಿ ಜಾತ್ರಾ ಜಾತ್ರೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಜರಗಲಿದೆ.
ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ರೀತಿ ರಿವಾಜು ಕಟ್ಟು ಕಟ್ಟಳೆಗಳ ಪ್ರಕಾರ ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಅವರ ಉಪಸ್ಥಿತಿಯಲ್ಲಿ ಮಾರೂರು ಖಂಡಿಗದ ವೇ.ಮೂ. ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ವಿಧ್ಯುಕ್ತವಾಗಿ ನಡೆಯಲಿದೆ.
ತಾರೀಕು 14:03:2026ನೇ ಶನಿವಾರ
ಕಾರ್ಯಕ್ರಮಗಳು
ಮೀನ ಸಂಕ್ರಮಣ ದಿನ ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ ರಾತ್ರಿ ಗಂಟೆ 09:30ಕ್ಕೆ ಪಡೋಡಿಗುತ್ತಿನಲ್ಲಿ ಉಪಹಾರ ರಾತ್ರಿ ಗಂಟೆ 10:00ಕ್ಕೆ ಪಡೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು
ಪಡ್ಡಾರಬೆಟ್ಟಕ್ಕೆ ಆಗಮನ, ದ್ವಜಾರೋಹಣ, ಬಲಿ, ಚೆಂಡು.
ತಾರೀಕು 15:03:2026ನೇ ಭಾನುವಾರ ಭೂತಬಲಿ ಉತ್ಸವ
ತಾರೀಕು 16:03:2026ನೇ ಸೋಮವಾರ
ಅಂಬೋಡಿ, ಬಲಿ, ಉತ್ಸವ ಹೂವಿನ ಪೂಜೆ, ರಥಾರೋಹಣ
ತಾರೀಕು 17:03:2026ನೇ ಮಂಗಳವಾರ
ವರ್ಷಾವಧಿ ಜಾತ್ರೋತ್ಸವ
ಮಧ್ಯಾಹ್ನ ಗಂಟೆ 12:00ರಿಂದ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ 1:30 ರಿಂದ 7:30ರ ತನಕ ಮಹಾ ಅನ್ನಸಂತರ್ಪಣೆ,
ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ
ತಾರೀಕು 18:03:2026ನೇ ಬುಧವಾರ ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡೋಡಿ ಗುತ್ತಿಗೆ ಭಂಡಾರ ಹಿಂದಿರುಗುವುದು
ತಾರೀಕು 19:03:2026ನೇ ಗುರುವಾರ ರಾತ್ರಿ ಗಂಟೆ 7:30ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ
ಪ್ರತಿ ಸಂಕ್ರಮಣ ಮತ್ತು ಜಾತ್ರಾ ಸಮಯದ 5 ದಿನಗಳು ಅನ್ನಸಂತರ್ಪಣೆ ಸೇವೆ ನಡೆಯಲಿರುವುದು ಎಂದು ಆಡಳಿತದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





