ವೇಣೂರು: ಅಜೀರ್ಣವಸ್ಥೆಯಲ್ಲಿರುವ ಕರಿಮಣೇಲು ಗ್ರಾಮದ ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯದ ಜೀರ್ಣೋದ್ಧಾರ ನಿಮಿತ್ತ ಭಕ್ತಾಧಿಗಳ ಪೂರ್ವಭಾವಿ ಸಭೆಯು ಮಾ. 1ರಂದು ಸಂಜೆ 5-00 ಗಂಟೆಗೆ ಸಾನಿಧ್ಯಗಳ ಸ್ಥಳದಲ್ಲಿ ಕರೆಯಲಾಗಿದೆ.




ಸಭೆಯಲ್ಲಿ ಬ್ರಹ್ಮಸಾನಿಧ್ಯಗಳ ಮುಂದಿನ ಜೀರ್ಣೋದ್ದಾರ ಕೆಲಸಗಳ ಬಗ್ಗೆ, ಜೀರ್ಣೋದ್ದಾರವನ್ನು ಪೂರ್ಣಗೊಳಿಸಿ ಪುನಃ ಪ್ರತಿಷ್ಠೆ ಗೆ ದಿನ ನಿಗದಿ ಮಾಡುವ ಬಗ್ಗೆ ಹಾಗೂ ಇನ್ನಿತ್ತರ ವಿಚಾರಗಳ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಜಿನರಾಜ್ ಜೈನ್ ಪದ್ಮಾಂಬ, ಮತ್ತು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.





