ವೇಣೂರು: ಇಲ್ಲಿಯ ಮೂಡುಕೋಡಿ ಗ್ರಾಮದ ಹಲೆಕ್ಕಿ ಮನೆ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಿದ್ಧ ಪೌರಾಣಿಕ ಯಕ್ಷಗಾನ ಬಯಲಾಟವು ಮಾ.24ರಂದು ಸಂಜೆ 5-30ರಿಂದ ನಡೆಯಲಿದೆ.
ಹಲೆಕ್ಕಿ ಮನೆಯ ಪ್ರಕಾಶ್ ಹೆಗ್ಡೆ ಮತ್ತು ಸುಪ್ರಿತಾ ಹೆಗ್ಡೆ ದಂಪತಿ ಮನೆಯವರಿಂದ ಈ ಸೇವೆಯಾಟ ನಡೆಯಲಿದ್ದು, ಭಕ್ತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸೇವಾಕರ್ತರು ತಿಳಿಸಿದ್ದಾರೆ. ಯಕ್ಷಗಾನ ಬಯಲಾಟದ ಸಂಪೂರ್ಣ ನೇರಪ್ರಸಾರ ನಿಮ್ಮ ನೆಚ್ಚಿನ ‘ನ್ಯೂಸ್ 19 ಕನ್ನಡ’ ಚಾನೆಲ್ನಲ್ಲಿ ಪ್ರಸಾರಗೊಳ್ಳಲಿದೆ.





