ವಿವಿಧ ಆಟೋಟ ಸ್ಪರ್ಧೆ, ಹಿರಣ್ಯಾಕ್ಷ – ಪ್ರಹ್ಲಾದ ಯಕ್ಷಗಾನ ಬಯಲಾಟ
ವೇಣೂರು: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣ ಸಮಿತಿ ಮೂಡುಕೋಡಿ ಇವರ ಮುಂದಾಳತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಕೋಡಿ, ಶ್ರೀರಾಮ ಭಜನ ಮಂಡಳಿ ನಡ್ತಿಕಲ್ಲು ಮೂಡುಕೋಡಿ ಇವುಗಳ ಸಹಕಾರದೊಂದಿಗೆ ಮೂರನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮತ್ತು ಯಕ್ಷಗಾನ ಕಾರ್ಯಕ್ರಮವು ಸೆ. 6ರಂದು ಮೂಡುಕೋಡಿ ನಡ್ತಿಕಲ್ಲು ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ.


ಬೆಳಿಗ್ಗೆ 8-30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ವೇಣೂರು ಯುವಸೇವಾ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷರಾಗಿರುವ ಕೆ. ವಿಜಯ ಗೌಡ ಮತ್ತುನಡ್ತಿಕಲ್ಲು ಶ್ರೀರಾಮ ಭಜನಾ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ ಯು. ರಾಜಗೋಪಾಲ್ ಭಟ್ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಶ್ರೀಮತಿ ಸುಜಾತ ರವರು ಗೌರವ ಉಪಸ್ಥಿತಿ ಇರಲಿದ್ದಾರೆ.
ವಿವಿಧ ಸ್ಪರ್ಧೆ
ಶಾಲಾ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಪ್ರತ್ಯೇಕ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಸಭಾ ಕಾರ್ಯಕ್ರಮ ನಡೆಯಲಿದ್ದು, ಮೂಡುಕೋಡಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣ ಸಮಿತಿಯ ಅಧ್ಯಕ್ಷರಾಗಿರುವ ಸದಾನಂದ ಪೂಜಾರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಮಂಗಳೂರಿನ ಉದ್ಯಮಿಗಳಾಗಿರುವ ಸೌರಭ ಕೊಟ್ಟಾರಿ, ಆನಂದ ಶೆಟ್ಟಿ, ಶಿಕ್ಷಕಿ ಶ್ರೀಮತಿ ಸುಬಲಕ್ಷ್ಮಿ ರಾಧಾಕೃಷ್ಣ ಬಂಗೇರ, ನಿವೃತ್ತ ವಿಜಯ ಬ್ಯಾಂಕ್ ಪ್ರಬಂಧಕ ಸೋಮಯ್ಯ ಅನೈನಡೆ ಉಪಸ್ಥಿತಿ ಇರಲಿದ್ದಾರೆ.
ಯಕ್ಷಗಾನ ಬಯಲಾಟ
ಸಂಜೆ 4-00 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಹಾಗೂ ಕು. ಸಿಂಚನಾ ಮೂಡುಕೋಡಿ ಭಾಗವತಿಗೆಯಲ್ಲಿ ‘ಹಿರಣ್ಯಾಕ್ಷ – ಪ್ರಹ್ಲಾದ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.



