ವೇಣೂರು: ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ಮೂಡುಕೋಡಿ ಇದರ ಆಶ್ರಯದಲ್ಲಿ 6ನೇ ವರ್ಷದ ಮೊಸರು ಕುಡಿಕೆ ಉತ್ಸವವು ಸೆ. 4ರಂದು ಬೆಳಿಗ್ಗೆ9-30ರಿಂದ ಮೂಡುಕೋಡಿಯ ಬೆದ್ರಡ್ಡ ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ನಡೆಯಲಿದೆ ಆಯೋಜಕರ ಪ್ರಕಟಣೆ ತಿಳಿಸಿದೆ.
ಮುದ್ದುಕೃಷ್ಣ ವೇಷ ಸ್ಪರ್ಧೆ ಸೇರಿದಂತೆ ಮಕ್ಕಳು, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವಿವಿಧ ಸ್ಪರ್ಧಾಕಾರ್ಯಕ್ರಮ ನಡೆಯಲಿದೆ.


ವಿಶೇಷ ಆಕರ್ಷಣೆ
ವಿಶೇಷ ಆಕರ್ಷಣೆಯಾಗಿ ಜೂಜು ರಹಿತ ತೆಂಗಿನಕಾಯಿ ಕಟ್ಟುವ ಸ್ಪರ್ಧೆ, ಮಲ್ಲಕಂಬ ಏರುವ ಸ್ಪರ್ಧೆ ನಡೆಯಲಿದೆ. ಉಮೇಶ್ ಕೋಟ್ಯಾನ್ ವಾಮದಪದವು ಮತ್ತು ರಶ್ಮಿ ನಾರಾವಿ ಬಳಗದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.



