ವೇಣೂರು: ಮೂಡುಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಪಿ.ಯನ್. ಪುರುಷೋತ್ತಮ ರಾವ್ರವರ ಅಧ್ಯಕ್ಷತೆಯಲ್ಲಿ ಸೆ. 19ರಂದು ಜರಗಿತು.
ಸಭೆಯಲ್ಲಿ ಸ್ಥಾಪಕ ಅಧ್ಯಕ್ಷರಾದ ಕಡಂಬಿಲ ಗುಣಪಾಲ ಅತಿಕಾರಿಯವರನ್ನು ಸನ್ಮಾನಿಸಲಾಯಿತು. ಅತೀ ಹೆಚ್ಚು ಹಾಲು ಪೂರೈಕೆ ಮಾಡಿರುವ ಮೂವರು ಸದಸ್ಯರನ್ನು,ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ 85% ಕ್ಕಿಂತ ಹೆಚ್ಟು ಅಂಕ ಪಡೆದ ಗ್ರಾಹಕರ ಮಕ್ಕಳನ್ನು ಅಭಿನಂದಿಸಲಾಯಿತು.
ಪ್ರತಿ ಲೀಟರ್ ಗೆ ರೂ. 0.65 ಪೈಸೆ ಬೋನಸ್ ನೀಡುವುದೆಂದು ಘೋಷಿಸಲಾಯಿತು. ಸಭೆಯಲ್ಲಿ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ರಾಕೇಶ್ ಪೂಜಾರಿಯವರು ಸ್ವಾಗತಿಸಿ, ಕಾರ್ಯದರ್ಶಿ ವಿಲ್ಫಡ್ ನಝರತ್ ರವರು ವಂದಿಸಿದರು.





