ಸಂಘದ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಅನುದಾನದ ಭರವಸೆಯಿತ್ತ ಸಚಿವರು
ಮಂಗಳೂರು: ಎರಡನೇ ಭಾರಿ ಅರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಉಳ್ಳಾಲ ಶಾಸಕ ಹಾಗೂ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಕೊಲ್ಯ ಕುಲಾಲ ಸಂಘದ ಅಧ್ಯಕ್ಷ, ಕುಲಾಲ-ಕುಂಬಾರ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿರುವ ಲ. ಅನಿಲ್ದಾಸ್ ಅವರ ನೇತೃತ್ವದಲ್ಲಿ ಸಂಘದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಈ ಹಿಂದೆ ಶಾಸಕರ ನಿಧಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ರೂ. ೮೦ ಲಕ್ಷಕ್ಕೂ ಮಿಕ್ಕಿ ಒದಗಿಸಿದ ಅನುದಾನವನ್ನು ಸ್ಮರಿಸಿದ ಅನಿಲ್ದಾಸ್ ಅವರು ಮತ್ತಷ್ಟು ಅನುದಾನದ ಅಗತ್ಯವಿದ್ದು, ಒದಗಿಸುವಂತೆ ಸಚಿವರಲ್ಲಿ ವಿನಂತಿಸಿದರು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಸಚಿವರು ಅನುದಾನ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಭಾಸ್ಕರ್ ಕುತ್ತಾರ್, ಕಾರ್ಯದರ್ಶಿ ರಂಜಿತ್ ಉಚ್ಚಿಲ್, ಕೋಶಾಧಿಕಾರಿ ಜಯಂತ್ ಸಂಕೋಳಿಗೆ, ಮನ್ಮೋಹನ್, ಸಂಜೀವ ಸೋಮೇಶ್ವರ್, ಪ್ರಕಾಶ್ ಪಿಲಿಕೂರು, ಮೋಹನ್ ಪಿಲಿಕೂರು, ಪ್ರವೀಣ್ ಕೊಲ್ಯ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.





