ಕಾರ್ಕಳ: ತಾಲೂಕಿನಲ್ಲಿ ಹಾಲಿ ಇರುವ 33 ಕೆವಿ ಎಣ್ಣೆಹೊಳೆ ವಿದ್ಯುತ್ ಮಾರ್ಗದಿಂದ 33/11 ಕೆವಿ ಬೈಲೂರು ವಿದ್ಯುತ್ ಕೇಂದ್ರದವರೆಗೆ, 33 ಕೆವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದ ಕಾಮಗಾರಿಯು ಮುಕ್ತಾಯ ಹಂತದಲ್ಲಿರುತ್ತದೆ. ಈ 33 ಕೆವಿ ವಿದ್ಯುತ್ ಪ್ರಸರಣ ಮಾರ್ಗವು ಬೈಲೂರು ಕಾರ್ಕಳ ಮುಖ್ಯರಸ್ತೆಯ ಎಡಭಾಗದಲ್ಲಿ ಬೈಲೂರು ಪೇಟೆಯ ಟ್ರಿನಿಟಿ ಕಾಂಪ್ಲೆಕ್ಸ್ ನಿಂದ ಎರ್ಲಪಾಡಿ ತಿರುವಿನವರೆಗೆ, ಎರ್ಲಪಾಡಿ ತಿರುವಿನಿಂದ ಬೈಲೂರು 33 ಕೆವಿ ವಿದ್ಯುತ್ ಕೆಂದ್ರದವರೆಗೆ ಸುಮಾರು 1.5 ಕಿ.ಮೀ, ನಷ್ಟು ಭೂಗತಕೇಬಲ್ ಮೂಲಕ ಹಾದು ಹೋಗಿದ್ದು, ದಿನಾಂಕ 20.04.2026 ಅನಂತರದ ಯಾವುದೇ ದಿನದಿಂದ ಈ ಪ್ರಸರಣ ಮಾರ್ಗದಲ್ಲಿ ವಿದ್ಯುತ್ ಹಾಯಿಸಲು ಉದ್ದೇಶಿಸಲಾಗಿದೆ.
ಈ ವಿದ್ಯುತ್ ಪ್ರಸರಣ ಮಾರ್ಗವು ಹಾದು ಹೋಗುವ ಗ್ರಾಮಗಳ ಪ್ರದೇಶಗಳಲ್ಲಿ ವಾಸಿಸುವವರು ಭೂ-ಅಗೆತ ಕಾಮಗಾರಿಗಳನ್ನುಮಾಡುವುದಾಗಲೀ ಅಥವಾ ವಿದ್ಯುತ್ ಪ್ರಸರಣ ಮಾರ್ಗದ ಕೆಳಭಾಗದಲ್ಲಿ ಯಾವುದೇ ತರಹದ ಚಟುವಟಿಕೆಗಳನ್ನು ಮಾಡಬಾರದಾಗಿ ಈ ಮೂಲಕ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಹಾಗೂ ತಿಳುವಳಿಕೆನೀಡಲಾಗಿದೆ. ಸೂಚನೆಗಳನ್ನು ಉಲ್ಲಂಘಿಸಿದರೆ ಅದರಿಂದ ಉಂಟಾಗಬಹುದಾದ ಕಷ್ಟ ನಷ್ಟಗಳಿಗೆ ಅವರುಗಳೇ ಜವಾಬ್ದಾರರಾಗಿರುತ್ತಾರೆ, ಮತ್ತು ಇಂತಹ ಚಟುವಟಿಕೆಗಳಿಗೆ ಮಂಗಳೂರು ವಿದ್ಯುಚ್ಚಕ್ತಿಸರಬರಾಜು ಕಂಪೆನಿ ನಿಯಮಿತವು (ಮೆಸ್ಕಾಂ) ಜವಾಬ್ದಾರರಾಗಿರುವುದಿಲ್ಲ, ಹಾಗೂ ವಿದ್ಯುಚ್ಛಕ್ತಿ ಕಾಯಿದೆ 2003 ರ ಅನ್ವಯ ಶಿಕ್ಷೆಗೆ ಅರ್ಹರಾಗಿರುತ್ತಾರೆ . ಸಾರ್ವಜನಿಕರು ಗಮನಿಸಿ, ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಲಾಗಿದೆ ಎ೦ದು ಮೆಸ್ಕಾ೦ ಪ್ರಕಟಣೆ ತಿಳಿಸಿದೆ.





