ಪಡಂಗಡಿ: ಮೂಲತಃ ಬೆಳ್ತಂಗಡಿಯ ಪಡಂಗಡಿಯವರಾದ ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ಜೇಸಿ. ಜ್ಯೋತಿ ಪ್ರಶಾಂತ್ ರವರು ಜೆಸಿಐ ಭಾರತದ ರಾಷ್ಟ್ರೀಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಜ್ಯೋತಿಯವರಿಗೆ ಅಧಿಕೃತವಾಗಿ ಪದವಿ ಪ್ರದಾನ ಮಾಡಲಾಯಿತು.
ಎಚ್.ಆರ್. ಪ್ರೊಫೆಷನಲ್ ಆಗಿರುವ ಜ್ಯೋತಿ ಅನೇಕ ಕಂಪನಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಹಿಳಾ ಸಬಲೀಕರಣ, ಜೀವನ ಕೌಶಲ್ಯಗಳು ಮತ್ತು ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ತರಬೇತಿಗಳನ್ನು ಆಯೋಜಿಸಿದ್ದಾರೆ.
ಪ್ರಸ್ತುತ ಅವರು ಮಣಿಪಾಲದ ಮಾಹೆ (MAHE) ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿನಿಯಾಗಿರುವ ಜ್ಯೋತಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಸುಬ್ರಹ್ಮಣ್ಯ ಪ್ರಸಾದ ನಿಲಯದ ನಿವಾಸಿ ನಿವೃತ್ತ ಅಧ್ಯಾಪಕ ದಿ. ನಾರಾಯಣ ಮೊಯಿಲಿಯವರ ಪುತ್ರಿಯಾಗಿದ್ದಾರೆ. ಉಡುಪಿಯ ಸಿವಿಲ್ ಇಂಜಿನಿಯರ್ ಪ್ರಶಾಂತ್ ದೇವಾಡಿಗರ ಪತ್ನಿಯಾಗಿದ್ದಾರೆ. ಜ್ಯೋತಿ, ಎಸ್. ಡಿ. ಎಂ ಕಾಲೇಜು ಉಜಿರೆಯ ಹಳೆ ವಿದ್ಯಾರ್ಥಿನಿ ಹಾಗೂ ಅಲ್ಲಿಯೇ ತರಬೇತಿ ನಿಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಅವರು ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲ್ಪಡುವ ಬೆಸ್ಟ್ ಸೋಶಿಯಲ್ ವರ್ಕರ್ ಅವಾರ್ಡ್ ಹಾಗೆಯೇ ಜೆಸಿಐ ವಲಯ 15ರ ಅತ್ಯುತ್ತಮ ತರಬೇತುದಾರರಿಗೆ ನೀಡುವ ಪ್ರೇರಣಾ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.






