ನವದೆಹಲಿ, ಜ. 16: ಸೌರಶಕ್ತಿ ಮತ್ತು ಸೌರ ಮಾರುಕಟ್ಟೆ (Solar Market) ಭಾರತದಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಈ ವರ್ಷ (2026) ಭಾರತ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆಯಾಗಲಿದೆ. ಸೌರ ಮಾರುಕಟ್ಟೆ ಗಾತ್ರದಲ್ಲಿ ಭಾರತ ಮೊದಲ ಬಾರಿಗೆ ಅಮೆರಿಕವನ್ನು ಹಿಂದಿಕ್ಕಲಿದೆ. ಜಾಗತಿಕವಾಗಿ ಸೌರ ಸ್ಥಾಪನೆಗಳು (Solar Installations) ಕುಸಿಯುತ್ತಿರುವಾಗ ಭಾರತದಲ್ಲಿ ಈ ಕ್ಷೇತ್ರ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹ.
2026ರಲ್ಲ ಭಾರತದಲ್ಲಿ 50 ಗಿಗಾವ್ಯಾಟ್ಗೂ ಅಧಿಕ ಸೌರ ವಿದ್ಯುತ್ ಶಕ್ತಿ ಸೇರ್ಪಡೆಯಾಗುವ ನಿರೀಕ್ಷೆ ಇದೆ. 2025ಕ್ಕೆ ಹೋಲಿಸಿದರೆ ಸೌರ ಶಕ್ತಿ ಸಾಮರ್ಥ್ಯ ಶೇ. 6ರಷ್ಟು ಹೆಚ್ಚಾಗಬಹುದು. ಮನೆಗಳ ಮೇಲ್ಛಾವಣಿ ಸೋಲಾರ್ ಸ್ಥಾಪನೆಗೆ ಸರ್ಕಾರ ನೀಡುತ್ತಿರುವ ಉತ್ತೇಜನವು ಭಾರತದಲ್ಲಿ ಹೊಸ ಸೋಲಾರ್ ಕೆಪಾಸಿಟಿ ಸೇರ್ಪಡೆಗೆ ಇರುವ ಕಾರಣಗಳಲ್ಲಿ ಒಂದು.
2030ರ ಗುರಿಯತ್ತ ಭಾರತ
2025ರಲ್ಲಿ ಜನವರಿಂದ ನವೆಂಬರ್ವರೆಗೆ ಭಾರತ 35 ಗಿಗಾವ್ಯಾಟ್ನಷ್ಟು ಹೊಸ ಸೌರವಿದ್ಯುತ್ ಸಾಮರ್ಥ್ಯ ಸೇರಿಸಿದೆ. 2030ರಲ್ಲಿ ಪಳೆಯುಳಿಕೆಯಲ್ಲದ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್ಗೆ ಬೆಳೆಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಭಾರತ ದಾಪುಗಾಲು ಇಡುತ್ತಿದೆ.
ಭಾರತದ ಮಾಡ್ಯೂಲ್ ಮ್ಯಾನುಫ್ಯಾಕ್ಚರಿಂಗ್ ಕೆಪಾಸಿಟಿ ಈಗ ವರ್ಷಕ್ಕೆ 125 ಗಿಗಾವ್ಯಾಟ್ ಮುಟ್ಟಿದೆ





