ಮಂಗಳೂರು: ಮುಂಗಾರು ಮಳೆಯ ತೀವ್ರತೆಯಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ನೀಡಲಾಗಿದ್ದ ರಜೆಯನ್ನು ಸರಿದೂಗಿಸುವ ಸಂಬಂಧ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿದ್ದುಪಡಿ ಮಾಡಿದ್ದು, ಸೆ. 2ನೇ ಶನಿವಾರದಿಂದ ಪೂರ್ಣ ತರಗತಿಗಳು ನಡೆಯಲಿದೆ ಎಂದು ಸ್ಪಷ್ಟನೆ ನೀಡಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯ ಕಾರಣ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳಿಗೆ ರಜೆಗಳನ್ನು ಘೋಷಿಸಿರುತ್ತಾರೆ. ಈವರೆಗೆ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಮತ್ತು ಮೂಡಬಿದ್ರೆ ತಾಲೂಕುಗಳಿಗೆ ಒಟ್ಟು ಎಂಟು ಪೂರ್ಣ ದಿನಗಳು ಮತ್ತು ಒಂದು ಅರ್ಧ ದಿನದ ರಜೆಯನ್ನು ಘೋಷಿಸಲಾಗಿರುತ್ತದೆ. ಮತ್ತು ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ವಲಯಗಳಿಗೆ ಒಟ್ಟು ಒಂಭತ್ತು ಪೂರ್ಣ ದಿನಗಳ ರಜೆಗಳನ್ನು ಘೋಷಿಸಲಾಗಿರುತ್ತದೆ.



